Jul 17, 2024, 4:56 PM IST
ರಾಜ್ಯಾದ್ಯಂತ ವರುಣಾರ್ಭಟ ಜೋರಾಗಿದೆ ಅದ್ರಲ್ಲೂ ಕರಾವಳಿ ಮಲೆನಾಡು ಭಾಗದಲ್ಲಂತೂ ಜಲಾರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಉಕ್ಕಿ ಹರಿಯುತ್ತಿರುವ ನದಿಗಳು ರೌದ್ರರೂಪ ತಾಳಿದ್ದು, ಗುಡ್ಡ ಕುಸಿತದಿಂದ ಹಲವರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಊರಿಗೆ ಊರೇ ಜಲದಿಗ್ಭಂದನಕ್ಕೊಳಗಾಗಿದೆ. ಸೇತುವೆಗಳು ಜಲಾವೃತಗೊಂಡಿದ್ದು, ಹಲವು ಮನೆಗಳು ಕುಸಿದು ಬಿದ್ದಿವೆ. ಮಲೆನಾಡು ಭಾಗದಲ್ಲಿ ಸುರೀತಿರೋ ಪುನರ್ವಸು ಮಳೆಯ(Rain) ಅಟ್ಟಹಾಸಕ್ಕೆ ಸಂಪೂರ್ಣ ಕರಾವಳಿ ತತ್ತರಿಸಿದೆ. ಬತ್ತಿ ಹೋಗಿದ್ದ ನದಿಗಳು ಈಗ ರೌದ್ರಾವತಾರ ತಾಳಿದ್ದು, ಊರಿಗೆ ಊರೇ ಮುಳುಗಿ ಹೋಗಿದೆ. ಮಲೆನಾಡಲ್ಲಿ ಸುರಿಯುತ್ತಿರುವ ಭೀಕರ ಮಳೆಗೆ ಮಲೆನಾಡಿಗರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ತುಂಗಾ ,ಹೇಮಾವತಿ, ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಜೀವ ಕೈಯಲ್ಲಿಡಿದು ಬದುಕುವಂತಾಗಿದೆ. ನದಿಗಳ ನೀರು(Water) ಜಮೀನು ಹಾಗೂ ರಸ್ತೆಗಳಿಗೆ ನುಗ್ಗಿ ಸಂಪೂರ್ಣ ಜಲಾವೃತವಾಗಿದ್ರೆ. ಭಾರೀ ಪ್ರಮಾಣದಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಇದನ್ನೂ ವೀಕ್ಷಿಸಿ: ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಸಾವು..! ಅವರು ರೀಲ್ಸ್‌ನಲ್ಲೇ ಧರ್ಮದ ಪಾಠ ಮಾಡ್ತಿದ್ರು..!