ದೀಪಾವಳಿ ವಿಭಿನ್ನವಾಗಿ ಆಚರಿಸುವ ಗೌಳಿ ಸಮುದಾಯ: ಬಲಿಪಾಡ್ಯಮಿ ದಿನ ಎಮ್ಮೆ, ಕೋಣ ಸಿಂಗರಿಸಿ ಸಂಭ್ರಮ

ದೀಪಾವಳಿ ವಿಭಿನ್ನವಾಗಿ ಆಚರಿಸುವ ಗೌಳಿ ಸಮುದಾಯ: ಬಲಿಪಾಡ್ಯಮಿ ದಿನ ಎಮ್ಮೆ, ಕೋಣ ಸಿಂಗರಿಸಿ ಸಂಭ್ರಮ

Published : Nov 10, 2023, 12:19 PM IST

ಕುಂದಾನಗರಿ ಬೆಳಗಾವಿ ಬಹುಭಾಷಿಕರಿಗೆ ನೆಲೆ ಕೊಟ್ಟಿರುವ ಜಿಲ್ಲೆ. ಈ ಕಾರಣಕ್ಕೆ ಬೆಳಗಾವಿಯಲ್ಲಿ  ಬಹುಭಾಷಾ ಸಂಸ್ಕೃತಿಯನ್ನ ಕಾಣಬಹುದು. ಯಾವುದೇ ಹಬ್ಬ ಇದ್ದರೂ ವಿಭಿನ್ನವಾಗಿ ಆಚರಿಸಲಾಗುತ್ತೆ.

ಬೆಳಗಾವಿಯ(Belagavi) ಗೌಳಿ ಸಮುದಾಯ ದೀಪಾವಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತದೆ. ಪ್ರತಿ ವರ್ಷದ ಬಲಿಪಾಢ್ಯಮಿ(Balipadyami) ದಿನ ಎಮ್ಮೆ–ಕೋಣಗಳನ್ನು ಸಿಂಗರಿಸಿ ಸಂಭ್ರಮಿಸುವುದೇ ಇಲ್ಲಿನ ವಿಶಿಷ್ಟ ಆಚರಣೆ. ಬದುಕಿನ ಅವಿಭಾಜ್ಯ ಅಂಗವಾದ ಎಮ್ಮೆಗಳು ಜೀವನಪೂರ್ತಿ ತಮ್ಮನ್ನು ಸಾಕುತ್ವೆ. ಅವುಗಳಿಗೆ ಕೃತಜ್ಞತೆ ಸಲ್ಲಿಸಲು ಪಾಡ್ಯದಂದು ಈ ಹಬ್ಬ ಆಚರಿಸಲಾಗುತ್ತೆ. ಇಲ್ಲಿನ ಕ್ಯಾಂಪ್ ಪ್ರದೇಶ, ಟಿಳಕವಾಡಿ, ಮಂಗಳವಾರ ಪೇಟೆ, ಚವಾಟ ಗಲ್ಲಿ, ಸರ್ದಾರ್ ಮೈದಾನ ಸೇರಿ ಹಲವಡೆ ಎಮ್ಮೆಗಳ ಓಟದ ಸ್ಪರ್ಧೆಯನ್ನು ಆಚರಿಸ್ತಾರೆ. ಇನ್ನು ಬಲಿಪಾಡ್ಯಮಿ ದಿನ  ಮನೆಯ ಅಂಗಳದಲ್ಲಿ ಕಿಚ್ಚು ಹಾಯಿಸುವುದೇ ತಡ, ಯುವಕರು ಎಮ್ಮೆಗಳ ಮುಂದೆ ಓಡಲು ಶುರು ಮಾಡುತ್ತಾರೆ. ಅವರನ್ನು ಬೆನ್ನಟ್ಟಿ ಎಮ್ಮೆಗಳೂ ಓಡುತ್ವೆ. ಎಮ್ಮೆಗಳ ಕಾಲಿಗೆ ಕಟ್ಟಿದ ಗೆಜ್ಜೆ, ಕೊರಳಿಗೆ ಹಾಕಿದ ಕವಡೆಯ  ಶಬ್ಧ ಕೇಳುವುದೇ ಇಲ್ಲಿನ ಜನಕ್ಕೆ ಆನಂದ . ಸಿಳ್ಳೆ, ಚಪ್ಪಾಳೆ, ಕೇಕೆ ಹಾಕಿದಾಗ ಗೌಳಿಗರಲ್ಲಿ ಮತ್ತಷ್ಟು ಹುಮ್ಮಸ್ಸು ಮೂಡುತ್ತೆ. ಬಹುಭಾಷಾ ಸಂಸ್ಕೃತಿ ಹೊಂದಿರುವ ಬೆಳಗಾವಿಯಲ್ಲಿ ಗುಜರಾತಿಗಳು, ಬಂಗಾಳಿಗಳು, ಬಿಹಾರಿಗಳು ಸೇರಿದಂತೆ ಉತ್ತರ ಭಾರತೀಯರು ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ದೀಪಾವಳಿಯಲ್ಲಿ ಸ್ಥಳೀಯ ಧಾರ್ಮಿಕ ಪದ್ಧತಿ ಅನುಸರಿಸುವ ಜತೆಗೆ, ತಮ್ಮ ನಾಡಿನ ಸಂಸ್ಕೃತಿಯನ್ನೂ ಅನಾವರಣಗೊಳಿಸುತ್ತಾರೆ.

ಇದನ್ನೂ ವೀಕ್ಷಿಸಿ:  ಬೆಳಕಿನ ಹಬ್ಬ ದೀಪಾವಳಿಗೆ ರಾಜ್ಯಾದ್ಯಂತ ಸಿದ್ಧತೆ: ಬೆಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಿದ್ಧತೆ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more