Aug 10, 2023, 12:13 PM IST
ಧಾರವಾಡ: ಜಿಲ್ಲೆಯ ಉಪ್ಪಿನ ಬೆಟಗೇರಿ ಗ್ರಾಮದ ಝಾನ್ಸಿ ಹೂಗಾರ(Jhansi Hugara) ಎಂಬ ಮಹಿಳೆ ಕೊರೊನಾ ನಂತರ ಸ್ವಂತ ಉದ್ಯೋಗ ಮಾಡಲು ಆರಂಭಿಸಿದ್ದಾರೆ. ಈ ಮೂಲಕ ಅವರು ಸಾವಿರಾರು ಮಹಿಳೆಯರಿಗೆ(Women) ಮಾದರಿಯಾಗಿದ್ದಾರೆ. ಅಮೃತ್ ನ್ಯಾಚುರಲ್ ಪ್ರೊಡಕ್ಟ್ ಎಂಬ ಹೆಸರಿನಲ್ಲಿ ಉದ್ಯೋಗವನ್ನು(business) ಆರಂಭಿಸಿದ್ರು. ಇದರಲ್ಲಿ ಅವರು ಪ್ರತಿ ತಿಂಗಳು ಒಂದು ಲಕ್ಷ 50 ಸಾವಿರ ಆದಾಯವನ್ನು ಗಳಿಸುತ್ತಿದ್ದಾರೆ. ಅಡುಗೆಗೆ ಬಳಸುವ ಶುದ್ಧ ಎಣ್ಣೆಯ ಗಾಣವನ್ನಿಟ್ಟುಕೊಂಡು ಈ ಮಹಿಳೆ ಉದ್ಯೋಗವನ್ನು ಮಾಡುತ್ತಿದ್ದಾರೆ. ಇವರ ಈ ಕೆಲಸಕ್ಕೆ ಪತಿ ಕೂಡ ಸಾಥ್ ನೀಡುತ್ತಿದ್ದಾರೆ. ಇದಕ್ಕೆ ಝಾನ್ಸಿಯವರು ಯಾವುದೇ ಬೇರೆ ಎಣ್ಣೆಯನ್ನು ಕಲಬೆರಕೆ ಮಾಡುವುದಿಲ್ಲ. ಪ್ರತಿ ದಿನ ಸುಮಾರು 5 ಸಾವಿರ ಆದಾಯವನ್ನು ಗಳಿಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಶಾಸಕರು ವರ್ಸಸ್ ಸಚಿವರ ಮಧ್ಯೆ ಗೊಂದಲಕ್ಕೆ ತೆರೆ ಎಳೆದರಾ..?: 3 ದಿನಗಳ ಜಿಲ್ಲಾವಾರು ಸಭೆಯಲ್ಲಿ ಸಿಎಂ ಹೇಳಿದ್ದೇನು..?