ಬಸವನಗುಡಿ ವಾರ್ಡ್‌ ಹೆಸರು ಬದಲಾವಣೆ: ಹೋರಾಟದ ಎಚ್ಚರಿಕೆ ನೀಡಿದ ನಿವಾಸಿಗಳು

ಬಸವನಗುಡಿ ವಾರ್ಡ್‌ ಹೆಸರು ಬದಲಾವಣೆ: ಹೋರಾಟದ ಎಚ್ಚರಿಕೆ ನೀಡಿದ ನಿವಾಸಿಗಳು

Published : Oct 15, 2023, 11:45 AM IST

ಕರ್ನಾಟಕ ಗೆದ್ದ ಕಾಂಗ್ರೆಸ್ ಸರ್ಕಾರ ಈಗ ಬಿಬಿಎಂಪಿ ವಾರ್ಡ್ಗಳ ಹೆಸರು ಬದಲಾವಣೆಗೆ ಮುಂದಾಗಿದೆ. ಅದ್ರಲ್ಲೂ ಬೆಂಗಳೂರಿನ ಒಂದು ಪುರಾತನ ವಾರ್ಡ್ ಹೆಸರು ಬದಲಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
 

ಬೆಂಗಳೂರಿನ ಫೇಮಸ್ ವಾರ್ಡ್‌ಗಳ ಪೈಕಿ ಮೊದಲ ಸ್ಥಾನ ಅಂದ್ರೆ ಅದು ಬಸವನಗುಡಿ(Basavanagudi). ಆದ್ರೆ ಬಿಬಿಎಂಪಿ(BBMP) ಇತ್ತೀಚೆಗೆ ಪ್ರಕಟಿಸಿದ 225 ವಾರ್ಡ್ ಗಳ ಪಟ್ಟಿಯಲ್ಲಿ ಕೆಲವು ವಾರ್ಡ್ ಗಳ ಹೆಸರನ್ನು ಬದಲಾಯಿಸಿದೆ. ಈ ಪೈಕಿ ಬಸವನಗುಡಿ ವಾರ್ಡ್ ಕೂಡ ಒಂದು. ಈ ಮೂಲಕ ಲಕ್ಷಾಂತರ ಜನರ ಭಾವನೆಯ ಪ್ರತೀಕವಾದ ಹೆಸರನ್ನು ಬದಲಾಯಿಸುವ ಮೂಲಕ ಹೊಸ ಸಂಕಷ್ಟವೊಂದನ್ನು ಬಿಬಿಎಂಪಿ ಮೈಮೇಲೆ ಎಳೆದುಕೊಂಡಿದೆ. ಬಸವನಗುಡಿಯಲ್ಲಿ ಒಟ್ಟು 6 ವಾರ್ಡ್‌ಗಳಿವೆ. ಇವುಗಳಲ್ಲಿ ಕೆಲವು ಗಡಿ ಬದಲಿಸಿ ಹೆಸರನ್ನೂ ಬದಲಾವಣೆ ಮಾಡಲಾಗಿದೆ. ಬಸವನಗುಡಿ ಬದಲಿಗೆ ದೊಡ್ಡಗಣಪತಿ ವಾರ್ಡ್(Dodganapati Ward) ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ. ಈ ಬಗ್ಗೆ ಯಾವ ಸಾರ್ವಜನಿಕರಿಗೂ ಮಾಹಿತಿ ಕೊಟ್ಟಿಲ್ಲ. ಇದರಿಂದ ಬಿಬಿಎಂಪಿಗೆ ಏನು ಲಾಭ ಇದೆ ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಐತಿಹಾಸಿಕ ಹೆಸರನ್ನು ಬದಲಾಯಿಸುವ ಈ ನಿರ್ಧಾರ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಜೊತೆಗೆ  ಸ್ಥಳೀಯ ಸಂಘಟನೆಗಳು ಬೃಹತ್ ಹೋರಾಟದ ಎಚ್ಚರಿಕೆ ನೀಡಿದೆ. 

ಇದನ್ನೂ ವೀಕ್ಷಿಸಿ:  Weekly-Horoscope: ಇಂದಿನಿಂದ ಶರತ್‌ ಕಾಲ ಆರಂಭ..ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ ?

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
Read more