ಬಾಂಗ್ಲಾ ಬೆಡಗಿಯ ಮೇಲೆ ಬಿದ್ದಿತ್ತು ಕಾಮದ ಕಣ್ಣು! ಅರ್ಧಗಂಟೆಯಲ್ಲಿ ಬರ್ತೀನಿ ಅಂದವಳು ನಾಪತ್ತೆ

ಬಾಂಗ್ಲಾ ಬೆಡಗಿಯ ಮೇಲೆ ಬಿದ್ದಿತ್ತು ಕಾಮದ ಕಣ್ಣು! ಅರ್ಧಗಂಟೆಯಲ್ಲಿ ಬರ್ತೀನಿ ಅಂದವಳು ನಾಪತ್ತೆ

Published : Jan 25, 2025, 08:20 PM IST

ಬೆಂಗಳೂರಿನಲ್ಲಿ ನೆಲೆಸಿದ್ದ ಬಾಂಗ್ಲಾದೇಶದ ಕುಟುಂಬವೊಂದರಲ್ಲಿ ನಡೆದ ದುರಂತ ಘಟನೆಯನ್ನು ಈ ವರದಿ ವಿವರಿಸುತ್ತದೆ. ಕೆಲಸಕ್ಕೆಂದು ಹೋದ ಮಹಿಳೆ ವಾಪಸ್ ಬಾರದೇ ಇದ್ದಾಗ, ಆಕೆಯ ಡೆಡ್ ಬಾಡಿ ಪತ್ತೆಯಾಗುತ್ತದೆ. ಮತ್ತೊಂದು ಪ್ರಕರಣದಲ್ಲಿ, ಗಂಡ ಹೆಂಡತಿಯ ಜಗಳ ದುರಂತ ಅಂತ್ಯ ಕಾಣುತ್ತದೆ.

ಅದು ಬಾಂಗ್ಲಾದೇಶದ ಕುಟುಂಬ. ಅದೇಗೆ ಯಾವಾಗ ಭಾರತಕ್ಕೆ ಬಂತೋ ಗೊತ್ತಿಲ್ಲ ಆದ್ರೆ ಬೆಂಗಳೂರಿನಲ್ಲಿ ಒಂದು ಪುಟ್ಟ ಗೂಡು ಮಾಡಿಕೊಂಡು ನೆಲಸಿತ್ತು. ಗಂಡ ಬಿಬಿಎಂಪಿಯಲ್ಲಿ ಡಿ ದರ್ಜೆಯ ನೌಕರನ್ನಾಗಿದ್ರೆ. ಹೆಂಡತಿ ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇನ್ನೂ ಅವರಿಗೆ ಇಬ್ಬರು ಮಕ್ಕಳು. ಕಡುಬಡತನವಿದ್ದರೂ ನೆಮ್ಮದಿಯ ಜೀವನ ಅವರದ್ದಾಗಿತ್ತು. ಆದ್ರೆ ಆವತ್ತೊಂದು ದಿನ ಹೆಂಡತಿ ಕೆಲಸಕ್ಕೆ ಅಂತ ಹೋದವಳು ವಾಪಸ್​ ಬರೋದೇ ಇಲ್ಲ. ಗಂಡ ಹುಡುಕಬಾರದ ಜಾಗವನ್ನೆಲ್ಲಾ ಹುಡುಕಿ ಪೊಲೀಸ್​ ಕಂಪ್ಲೆಂಟ್​​ ಅನ್ನೂ ಕೊಟ್ಟ. ಆದ್ರೆ ಕೇಸ್​​ ದಾಖಲಿಸಕೊಂಡು ತನಿಖೆ ನಡೆಸಿದ ಪೊಲೀರಿಗೆ ಆ ಮಹಿಳೆಯ ಡೆಡ್​​ ಬಾಡಿ ಸಿಗುತ್ತೆ. ಹಾಗಾದ್ರೆ ಆ ಹೆಣ್ಣು ಮಗಳಿಗೆ ಏನಾಯ್ತು? ಬೆಂಗಳೂರನ್ನೇ ಬೆಚ್ಚಿ ಬಿಳಿಸಿದ ಬಾಂಗ್ಲಾ ಮಹಿಳೆಯ ಮರ್ಡರ್​​ ಕಹನಿಯೇ ಇವತ್ತಿನ ಎಫ್​.ಐ.ಆರ್​​. 

ಅವರಿಬ್ಬರು ಪ್ರೀತಿಸಿ ಮದುವೆಯಾದವರು. ಒಬ್ಬ ಮಗ ಕೂಡ ಇದ್ದ. ಗಂಡ ಕ್ಯಾಬ್​​ ಡ್ರೈವರ್​​ ಆದ್ರೆ, ಹೆಂಡತಿ ಮಗನನ್ನ ನೋಡಿಕೊಂಡು ಮನೆಯಲ್ಲೇ ಇದ್ದಳು. ಆದ್ರೆ ಎರಡು ವರ್ಷದಿಂದೇಚೆಗೆ ಗಂಡ ಹೆಂಡಿರ ನಡುವೆ ವೈಮನಸ್ಸು ಶುರುವಾಗಿದೆ. ಸಣ್ಣ ಪುಟ್ಟ ವಿಷಯಗಳಿಗೂ ಜಗಳ. ನೋಡೋವರೆಗೂ ನೋಡಿದ ಹೆಂಡತಿ ಸೀದಾ ತವರು ಮನೆಗೆ ಹೋಗಿ ಕೂತುಬಿಡ್ತಾಳೆ. ಗಂಡ ಕೂಡ ತಾಯಿ ಮನೆಯಲ್ಲೇ ಇರ್ತಾನೆ. ಆದ್ರೆ ಅವತ್ತು ಏನಾಯ್ತೋ ಏನೋ ಹೆಂಡತಿಯನ್ನ ಕರೆದುಕೊಂಡು ಬರಲೇ ಬೇಕು ಅಂತ ಆಕೆಯ ಮನೆಗೆ ಹೋಗಿದ್ದಾನೆ. ಆದ್ರೆ ಹೆಂಡತಿ ಮಾತ್ರ ಆತ ಎಷ್ಟೇ ಕರೆದರು ಬರೋದಿಲ್ಲ. ನೋಡೋವರೆಗೂ ನೋಡಿದ ಗಂಡ ಸೀದ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡುಬಿಡ್ತಾನೆ. 
 
ಗಂಡ ಹೆಂಡಿರ ಜಗಳ ಉಂಡು ಮಲಗೋವರೆಗೂ ಅಂತಾರೆ. ಒಂದು ವೇಳೆ ಉಂಡು ಮಲಗಿದ ಮೇಲೆ ಮುಂದುವರೆದರೆ ಏನಾಗುತ್ತೆ ಅನ್ನೋದಕ್ಕೆ ಈ ಮಂಜುನಾಥನ ಕಥೆಯೇ ಸಾಕ್ಷಿ.

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more