Apr 29, 2022, 12:27 PM IST
ವಿಷಪೂರಿತ ಬೃಹತ್ ಗಾತ್ರದ ಹಾವೊಂದನ್ನು ಗಟ್ಟಿಗಿತ್ತಿ ಮಹಿಳೆಯೊಬ್ಬಳು ಬರಿಗೈಲಿ ಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಹುತೇಕರು ಹಾವು ಅಂದ್ರೆ ಮಾರು ದೂರ ಓಡ್ತಾರೆ. ಆದರೆ ಮತ್ತೆ ಕೆಲವರು ತಮ್ಮ ಜೀವದ ಹಂಗು ತೊರೆದು ಅದೇ ಸರ್ಪಗಳನ್ನ ಹಿಡಿಯೋ ಸಾಹಸಕ್ಕೆ ಕೈ ಹಾಕ್ತಾರೆ. ಹಾಗೆಯೇ ಇಲ್ಲೊಬ್ಬರು ಆಕೆಗಿಂತಲೂ ಗಾತ್ರದಲ್ಲಿ ಎರಡು ಪಟ್ಟು ಹೆಚ್ಚಿರುವ ಭಾರಿ ಗಾತ್ರದ ಹಾವೊಂದನ್ನು ಸೆರೆ ಹಿಡಿದಿದ್ದು, ಈ ದೃಶ್ಯ ನೋಡುಗರ ಮೈ ಜುಮ್ಮೆನಿಸುವಂತಿದೆ. ಪಾಳುಬಿದ್ದಂತೆ ಕಾಣುವ ಕಟ್ಟಡದ ಕೋಣೆಯಲ್ಲಿ ದೊಡ್ಡ ಹಾವನ್ನು ಹಿಡಿಯಲು ಮಹಿಳೆ ಮುಂದಾಗಿದ್ದು ಮೊದಲು ಮಹಿಳೆ ಕೋಲಿನ ಸಹಾಯದಿಂದ ಹಾವನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಾಳೆ. ನಂತರ ಕೋಲನ್ನು ಎಸೆದು ಬರಿಗೈಯಲ್ಲಿಯೇ ಹಾವನ್ನು ಹಿಡಿಯಲು ಮುಂದಾಗ್ತಾಳೆ ಈ ಬಹದ್ದೂರ್ ಹೆಣ್ಣು.