Jan 27, 2024, 4:33 PM IST
ವಾರಾಣಸಿ ಪುರದೊಡೆಯ ವಿಶ್ವನಾಥ.. ನಂಬಿ ಬಂದ ಭಕ್ತರ ಬದುಕಿದೆ ಬೆಳಕನ್ನ ನೀಡೋನು. ಕಾಶಿ ವಿಶ್ವನಾಥ ದೇವಸ್ಥಾನವು(Kashi Vishwanath Temple) ಜಗದ್ ರಕ್ಷಕ ಮಹೇಶ್ವರನ ಪವಿತ್ರ ಭೂಮಿಯಲ್ಲಿ ಇರುವ ಪ್ರಖ್ಯಾತ ದೇವಸ್ಥಾನ. ಜ್ಯೋತಿರ್ಲಿಂಗದ(Jyotirlinga) ದರ್ಶನವು ಬಹು ಪವಿತ್ರವಾದದ್ದು ಅಂತಲೇ ಭಾವಿಸಲಾಗುತ್ತದೆ. ಆದ್ದರಿಂದ ಈ ದೇವಸ್ಥಾನವು ಯಾವಾಗಲೂ ಭಕ್ತರಿಂದ ತುಂಬಿರುತ್ತದೆ. ಕಾಶಿ ವಿಶ್ವನಾಥನನ್ನ ನೋಡೋ ಸಲುವಾಗಿ ಎಲ್ಲೆಲ್ಲಿಂದ ಭಕ್ತಾದಿಗಳು ಬರ್ತಾರೆ ಅಂದ್ರೆ ರಾಜ್ಯದ ಎಲ್ಲೆಗಳನ್ನ ದಾಟಿಕೊಂಡು ಸಮುದ್ರವನ್ನ ಹಾರಿಕೊಂಡು. ಅಷ್ಟೊಂದು ಶಕ್ತಿ ಶಾಲಿ ಕಾಶಿಯ ವಿಶ್ವನಾಥ. ಸಾಯೋದ್ರೊಳಗೆ ಒಮ್ಮೆಯಾದ್ರೂ ಕಾಶಿಗೆ ಹೋಗ್ಬೇಕು ಅನ್ನೋ ಆಸೆ ಅದೆಷ್ಟೋ ಕೋಟಿ ಹಿಂದೂಗಳದ್ದು(Hindus). ಶಿವನ ಆರಾಧಕರು ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಕ್ತಾರೆ. ಕಾಶಿಗೆ ಹೋದ್ರೆ ಮಾಡಿದ ಪಾಪಗಳು ಇದ್ದಲ್ಲಿ ಅದು ಪರಿಹಾರವಾಗುತ್ತೆ ಅನ್ನೋ ನಂಬಿಕೆಯಿದೆ. ಅಲ್ಲದೇ ಅಲ್ಲಿ ಹೋದಾಗ ನಮ್ಮಲ್ಲಿ ಧನಾತ್ಮಕ ಶಕ್ತಿಯೊಂದು ಉತ್ಪತ್ತಿಯಾಗುತ್ತೆ ಅಂತಾರೆ ಸಾಕಷ್ಟು ಜನರಿಗೆ ಈ ಅನುಭವ ಆಗಿದೆ. ಕಾಶಿ ವಿಶ್ವನಾಥ ದೇವಾಲಯವು ಶಿವನಿಗೆ ಅರ್ಪಿತವಾದ ಪ್ರಸಿದ್ಧ ದೇವಾಲಯ. ಉತ್ತರ ಪ್ರದೇಶದ(Uttarapradesh) ವಾರಾಣಸಿಯಲ್ಲಿನ ಗಂಗಾ ನದಿಯ ಪಶ್ಚಿಮ ದಂಡೆಯಲ್ಲಿದೆ. ಕಾಶಿ ವಿಶ್ವನಾಥ ದೇವಾಲಯವು ಶಿವನ ಹನ್ನೆರೆಡು ಜ್ಯೋತಿರ್ಲಿಂಗಗಳಲ್ಲಿ ಒಂದು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡ ದೇವಾಲಯವಾಗಿದೆ. ಅಲ್ಲಿ ನಡೆಯೋ ಗಂಗಾಪೂಜೆಯಂತೂ ಅದ್ಭುತ..ಪರಮಾದ್ಭುತ.
ಇದನ್ನೂ ವೀಕ್ಷಿಸಿ: Murder news: ಅದು ಹಿಂದೂ-ಮುಸ್ಲಿಂ ಲವ್ ಸ್ಟೋರಿ..! ತಂಗಿಯ ಪ್ರೀತಿಗೆ ಅಣ್ಣನೇ ವಿಲನ್..!