Rajeev Chandrasekhar:ಭಯೋತ್ಪಾದಕರಿಗೆ ಪಿಣರಾಯಿ ವಿಜಯನ್‌ರಿಂದ ಕೇರಳಕ್ಕೆ ರೆಡ್‌ ಕಾರ್ಪೆಟ್‌ ಸ್ವಾಗತ!

Rajeev Chandrasekhar:ಭಯೋತ್ಪಾದಕರಿಗೆ ಪಿಣರಾಯಿ ವಿಜಯನ್‌ರಿಂದ ಕೇರಳಕ್ಕೆ ರೆಡ್‌ ಕಾರ್ಪೆಟ್‌ ಸ್ವಾಗತ!

Published : Oct 30, 2023, 08:19 PM IST

ಕಲಮಸ್ಸೆರಿ  ಸ್ಫೋಟಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದ ವಿರುದ್ಧ ಮತ್ತೊಮ್ಮೆ ಕಿಡಿಕಾರಿರುವ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಕೇರಳ ಸಿಎಂ ಪಿಣರಾಯಿ ವಿಜಯನ್‌ ಭಯೋತ್ಪಾದಕರಿಗೆ ರೆಡ್‌ ಕಾರ್ಪೆಟ್‌ ಸ್ವಾಗತ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 


ಕೊಚ್ಚಿ (ಅ.30):  ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಭ್ರಷ್ಟಾಚಾರ, ಅಸಮರ್ಥತೆ ಮತ್ತು ಅದಕ್ಷತೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಕ್ಟೋಬರ್ 30 ರಂದು ಕೇರಳದ ಕಲಮಸ್ಸೆರಿ ಸ್ಫೋಟದ ಸ್ಥಳ ಮತ್ತು ಘಟನೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದ ಬಳಿಕ ಕೊಚ್ಚಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಜೀವ್‌ ಚಂದ್ರಶೇಖರ್, ಕೇರಳ ಸರ್ಕಾರವು "ರಾಜ್ಯದಲ್ಲಿ ಉಗ್ರಗಾಮಿ ಅಂಶಗಳಿಗೆ ಕೆಂಪು ರತ್ನಗಂಬಳಿ ಹಾಸಿದೆ" ಎಂದು ಆರೋಪಿಸಿದರು.

ಎಡಪಕ್ಷಗಳು ಭಯೋತ್ಪಾದಕರ ಕುರಿತಾಗಿ ಮೃದು ಧೋರಣೆ ತೋರಿಸುತ್ತಿದೆ. ಕೇರಳದಲ್ಲಿ ಭಯೋತ್ಪಾದಕ ಘಟನೆಗಳು ಹೆಚ್ಚಾದಾಗ ಅಲ್ಲಿನ ಘಟನೆಗಳ ಬಗ್ಗೆ ಸರ್ಕಾರ ಗಮನ ನೀಡೋದೇ ಇಲ್ಲ. ಮುಸ್ಲಿಂ ಲೀಗ್‌ನ ಮುನೀರ್ ಮತ್ತು ಸಿಪಿಎಂನ ಸ್ವರಾಜ್ ಹಮಾಸ್ ಅನ್ನು ಸಮರ್ಥಿಸುತ್ತಿದ್ದಾರೆ. ಆದರೆ ಭಯೋತ್ಪಾದನೆಯನ್ನು ವಿರೋಧಿಸುವವರನ್ನು ಕೋಮುವಾದಿಗಳು ಎಂದು ಕರೆಯುತ್ತಾರೆ. ಕೋಮು ತುಷ್ಟೀಕರಣ ಉಗ್ರವಾದವನ್ನು ಹುಟ್ಟು ಹಾಕುತ್ತದೆ. ಈ ಹಿಂದೆಯೂ ಇದೇ ನೀತಿಯನ್ನು ಕಾಂಗ್ರೆಸ್ ಅಳವಡಿಸಿಕೊಂಡಿತ್ತು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

ಕೇರಳದ ಪ್ಯಾಲಿಸ್ತೇನ್‌ ಪರ ಸಮಾವೇಶದಲ್ಲಿ ವರ್ಚುವಲ್‌ ಆಗಿ ಮಾತನಾಡಿದ ಹಮಾಸ್‌ ಭಯೋತ್ಪಾದಕ Khaled Mashal

ಇದೇ ವೇಳೆ ತಮ್ಮನ್ನು ಕೋಮುವಾದಿ ಎಂದು ಕರೆಯಲು ಮುಖ್ಯಮಂತ್ರಿಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದರು. ಪಿಣರಾಯಿ ದೆಹಲಿಯಲ್ಲಿ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಕೇರಳದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಪತ್ರಕರ್ತರಿಗೆ ನಿಷೇಧ ಹೇರಿದ್ದು ಇದೇ ಮುಖ್ಯಮಂತ್ರಿ. ಹಮಾಸ್ ನಾಯಕನಿಗೆ ಕೇರಳದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸರ್ಕಾರ ಅನುಮತಿ ನೀಡಿರುವುದು ಕೂಡ ಟೀಕೆಗೆ ಗುರಿಯಾಗಿದೆ.

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more