Dec 9, 2021, 6:03 PM IST
ಚೆನ್ನೈ(ಡಿ.09): ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ 13 ಸೇನಾಧಿಕಾರಿಗಳ ಪಾರ್ಥೀವ ಶರೀರವನ್ನು ನೀಲಗಿರಿಯ ಮದ್ರಾಸ್ ರಿಜಿಮೆಂಟ್ ಕೇಂದ್ರದಿಂದ ಸೂಲುರ ವಾಯುನೆಲೆಗೆ ಆ್ಯಂಬುಲೆನ್ಸ್ ಮೂಲಕ ಸಾಗಿಸಲಾಗಿದೆ. ಈ ವೇಳೆ ದಾರಿಯುದ್ದಕ್ಕೂ ಜನರು ನಿಂತು ಹೂಗಳನ್ನು ಚೆಲ್ಲಿದರು. ಕಣ್ಣೀರಿನಿಂದಲೇ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ. ವೀರ್ ವಣಕ್ಕಂ ಎಂದೂ ಘೋಷಣೆ ಕೂಗಿದ್ದಾರೆ.
ಸೂಲುರು ವಾಯುಲೆನೆಯಿಂದ ಸೇನಾ ವಿಮಾನದಲ್ಲಿ ಪಾರ್ಥೀವ ಶರೀರಗಳನ್ನು ನವದೆಹಲಿಗೆ ತರಲಾಗುತ್ತಿದೆ. ದೇಶದಲ್ಲಿ ದುಃಖ ಮಡುಗಟ್ಟಿದೆ. ಗುರುವಾರ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತದ ಮೊದಲ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಸೇನಾಧಿಕಾರಿಗಳು ಮೃತಪಟ್ಟಿದ್ದರು. ಇದು ದೇಶದಲ್ಲಿ ನಡೆದ ಅತ್ಯಂತ ಘೋರ ಸೇನಾ ಹೆಲಿಕಾಪ್ಟರ್ ಪತನವಾಗಿದೆ.