508 ದಿನಗಳಲ್ಲಿ ನನಸಾಗಲಿದೆ ಮೂರು ದಶಕದ ಕನಸು!

508 ದಿನಗಳಲ್ಲಿ ನನಸಾಗಲಿದೆ ಮೂರು ದಶಕದ ಕನಸು!

Published : Aug 24, 2022, 04:19 PM IST

ಇನ್ನು 508 ದಿನಗಳಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಲಿದೆ. ಮೂಲಗಳ ಪ್ರಕಾರ, 2024ರ ಜನವರಿ 14 ರಂದು ಈಗಾಗಲೇ ಮಹೂರ್ತವನ್ನು ನಿಗದಿ ಮಾಡಲಾಗಿದ್ದು, ಅದೇ ದಿನ ಶ್ರೀರಾಮನ ಮೂರ್ತಿಯನ್ನು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅದರೊಂದಿಗೆ ಮೂರು ದಶಕಗಳ ಕನಸು ನನಸಾಗಲಿದೆ.

ಬೆಂಗಳೂರು (ಆ.24): ಹಿಂದುಗಳ ಮೂರು ದಶಕಗಳ ಹೋರಾಟದ ಫಲ ಸಿಗುವ ದಿನಗಳು ಹತ್ತಿರವಾಗಿದೆ. ಅಯೋಧ್ಯೆಯಲ್ಲಿ ಈಗಾಗಲೇ ರಾಮ ಮಂದಿರ ನಿರ್ಮಾಣದ ಕಾಮಗಾರಿ ಅರಂಭವಾಗಿದೆ. ಈಗಿರುವ ಮಾಹಿತಿಗಳ ಪ್ರಕಾರ, 2024ರ ಜನವರಿ 14 ರಂದು ರಾಮಲಲ್ಲನ ವಿಗ್ರಹ ಅಯೋಧ್ಯೆಯ ಹೊಸ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ. ಅದರೊಂದಿಗೆ ಇನ್ನು 508 ದಿನಗಳಲ್ಲಿ ಮೂರು ದಶಕಗಳ ಕನಸು ನನಸಾಗಲಿದೆ.

ರಾಮಮಂದಿರ ನಿರ್ಮಾಣ ಕಾರ್ಯ ಇನ್ನೆರಡು ವರ್ಷಗಳೊಳಗೇ ಮುಗಿದು ಹೋಗುತ್ತೆ.. ಇನ್ನೊಂದ್ ಕಡೆ, ರಾಷ್ಟ್ರ ರಾಜಕೀಯದ ಮಹತ್ತರ ಘಟ್ಟ ಅನ್ನಿಸಿಕೊಂಡಿರೋ ಲೋಕಸಭಾ ಚುನಾವಣೆಗೂ 2 ವರ್ಷ ಬಾಕಿ  ಇದೆ. ಇನ್ನು 500 ದಿನಗಳಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತೆ ಆದರೆ, ಇದಾದ ಬಳಿಕ ದೇಶದ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಪರಿಣಾಮಗಳು ಆಗುತ್ತವೆ.

ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ ದಿನದಂದೇ ಕಾಂಗ್ರೆಸ್‌ ಕಪ್ಪುಬಟ್ಟೆ ಧರಿಸಿದ್ದೇಕೆ?

ಮಂದಿರ ನಿರ್ಮಾಣ ಆದ ಮೇಲೆ ಖಂಡಿತವಾಗಿ ಹೊಸ ರಾಜಕೀಯ ಪರ್ವ ಆರಂಭವಾಗಲಿದೆ. ರಾಮನ ರಹಸ್ಯದಲ್ಲಿ ಕಮಲ ಪಾಳಯ ರಾಜಕೀಯ ಲೆಕ್ಕಾಚಾರ ಹಾಕಿಕೊಂಡಿದೆ. ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಶ್ರಮ ವಹಿಸಿದ ಕಾರಣಕ್ಕೆ ಪ್ರಭು ಶ್ರೀರಾಮ ವರ ನೀಡ್ತಾನೆ ಅನ್ನೋ ನಂಬಿಕೆಯಲ್ಲಿ ಬಿಜೆಪಿ ಪಕ್ಷವಿದೆ.

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
Read more