Feb 9, 2022, 12:49 AM IST
ಪಂಜಾಬ್(ಫೆ.09): ಹೆದ್ದಾರಿಯಲ್ಲಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿಯಿಂದ ಭೀಕರ ಅಪಘಾತ ಪಂಜಾಬ್‌ನ ಮೊಗಾ ಬಳಿ ಸಂಭವಿಸಿದೆ. ಬಾಲಿವುಡ್ ನಟ ಸೋನು ಸೂದ್ ಇದೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಕೂಗಳತೆ ದೂರದಲ್ಲಿ ಅಪಘಾತ ಸಂಭವಿಸಿದೆ. ತಕ್ಷಣ ಕಾರು ನಿಲ್ಲಿಸಿದ ಸೋನು ಸೂದ್ ಕಾರಿನತ್ತ ಓಡಿ ಹೋಗಿ ಅಸ್ವಸ್ಥಗೊಂಡಿದ್ದ ಯವಕನ ಸ್ವತಃ ಎತ್ತಿ ತಮ್ಮ ಕಾರಿನಲ್ಲಿ ಆಸ್ಪತ್ರೆ ದಾಖಲಿಸಿದ್ದಾರೆ.
ಫೆಬ್ರವರಿ 8ರ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ. ಇಬ್ಬರು ಯುವಕರು ಪ್ರಯಾಣಿಸುತ್ತಿದ್ದ ಕಾರು ಅಪರಿಚತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಒರ್ವ ತೀವ್ರ ಗಾಯಗೊಂಡು ಅಸ್ವಸ್ಥನಾಗಿದ್ದಾನೆ. ಕಾರು ಸೆಂಟ್ರಲ್ ಲಾಕ್ ಆದ ಕಾರಣ ಕಾರಿನಲ್ಲಿದ್ದ ಮತ್ತೊರ್ವ ಯುವ ಗಾಜು ಒಡೆದು ಹೊರಬಂದಿದ್ದಾನೆ. ಗಾಯಗೊಂಡ ಯುವಕನ ಕಾರಿನ ಹೊರತೆಗೆಯಲು ಹರಸಾಹಸ ಪಟ್ಟಿದ್ದಾನೆ. ಆದರೆ ಸಾಧ್ಯವಾಗಿಲ್ಲ. ಇದೇ ವೇಳೆ ಸಹದೋರಿ ಮಾಳವಿಕಾ ಸೂದ್ ಅವರ ಚುನಾವಣಾ ಪ್ರಚಾರ ಮುಗಿಸಿ ಆಗಮಿಸುತ್ತಿದ್ದ ಸೋನು ಸೂದ್ ಅಪಘಾತ ನೋಡಿ ಕಾರು ನಿಲ್ಲಿಸಿ ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಯುವಕ ಗಾಯಗೊಂಡು ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದ. ಕಾರಿನ ಬಾಗಿಲು ತೆರೆದು ಅಸ್ವಸ್ಥಗೊಂಡಿದ್ದ ಯುವಕನ ಸ್ವತಃ ಎತ್ತಿಕೊಂಡು ತಮ್ಮ ಕಾರಿನಲ್ಲಿ ಮಲಗಿಸಿದ್ದಾರೆ. ಬಳಿಕ ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಇದೀಗ ಯುವಕ ಚೇತರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಕಾರ್ಯಗಳ ಮೂಲಕ ಈಗಾಗಲೇ ಜನರ ಮನಗೆದ್ದಿರುವ ಸೂನು ಸೂದ್ ಅಪಘಾತದ ಸಂದರ್ಭದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ ಜೀವ ಉಳಿಸಿದ ಮಹತ್ ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ.