
ಬಸ್ ಅಪಘಾತ, ದರೋಡೆ, ಆಟೋ ಪಲ್ಟಿ, ದಾಂಧಲೆ, ಕಳ್ಳತನ, ಬಸ್ ಚಾಲಕನಿಗೆ ತರಾಟೆ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋಗಳು ಇಲ್ಲಿವೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಲವು ವೀಡಿಯೋಗಳ ತುಣುಕು ಇಲ್ಲಿದೆ. ಬಸ್ಸೊಂದು ಸಡನ್ ಬ್ರೇಕ್ ಹಾಕಿದ ಪರಿಣಾಮ ರಸ್ತೆ ಬಿದ್ದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಗನ್ ಹಿಡಿದು ದರೋಡೆಗೆ ಬಂದ ಖತರ್ನಾಕ್ ಕಳ್ಳನೋರ್ವನಿಗೆ ಅಲ್ಲಿದ್ದ ಯುವಕರು ಚಳಿ ಬಿಡಿಸಿದ್ದಾರೆ. ಹಾಗೆಯೇ ರಸ್ತೆಯಲ್ಲಿದ್ದ ಹೊಂಡಕ್ಕೆ ಬಿದ್ದು ಆಟೋವೊಂದು ಪಲ್ಟಿಯಾಗಿದೆ. ಸಾಲ ಕೊಡಲ್ಲ ಅಂದಿದ್ದಕ್ಕೆ ಬೇಕರಿ ಐಟಂಗಳು ಬೀದಿಗೆಸೆದು ಯುವಕರಿಬ್ಬರು ದಾಂಧಲೆ ನಡೆಸಿದ್ದಾರೆ. ಹಾಗೆಯೇ ಖಾವಿ ತೊಟ್ಟ ಖದೀಮನೋರ್ವ ಸೈಕಲ್ ಕದ್ದು ಕಾಲ್ಕಿತ್ತಿದ್ದಾನೆ. ಗ್ರಾಹಕರ ಸೋಗಲ್ಲಿ ಎಂಟ್ರಿ ಕೊಟ್ಟ ಕಳ್ಳಿಯರು ಕೈಗೆ ಸಿಕ್ಕಿದ್ದೆಲ್ಲಾ ಎತ್ಕೊಂಡು ಪರಾರಿಯಾಗಿದ್ದಾರೆ. ಬಸ್ ನಿಲ್ಲಿಸಲಿಲ್ಲ ಅಂತ ರೊಚ್ಚಿಗೆದ್ದ ಮಹಿಳೆಯೊಬ್ಬರು ಬಸ್ ಒಳಗೆ ನುಗ್ಗಿ ಚಾಲಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆಯೇ ತಾಯಿ ಹಿಂದೆ ಹೋದ ಮಗುವೊಂದು ಮೆಟ್ಟಿಲಿನಿಂದ ಬಿದ್ದಂತಹ ಘಟನೆ ನಡೆದಿದೆ. ಇದೆಲ್ಲವೂ ಸಿಸಿಟಿವಿ ದೃಶ್ಯಾವಳಿಗಳಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.