
ATM ಕಳ್ಳತನ, ಕಾರ್ ಚೇಸ್ ಹಲ್ಲೆ ಮತ್ತು ಮಗುವಿನ ದುರ್ಮರಣ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಲವು ವೈರಲ್ ವೀಡಿಯೊಗಳು ಇಲ್ಲಿವೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಲವು ವೀಡಿಯೋಗಳ ಡಿಟೇಲ್ ಇಲ್ಲಿದೆ ನೋಡಿ ATM ಕಳ್ಳತನ ಮಾಲು ಬಂದ ಕಳ್ಳನೋರ್ವ ಪೊಲೀಸರ ಕೈಗೆ ತಗಲಾಕೊಂಡಿದ್ದಾನೆ. ಬಳ್ಳಾರಿಯ ಕಾಳಮ್ಮ ಸರ್ಕಲ್ನಲ್ಲಿರೋ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಮತ್ತೊಂದು ಕಡೆ ಕ್ಷುಲ್ಲಕ ಕಾರಣಕ್ಕೆ ಕಿರಿಕ್ ಮಾಡಿ ಕಾರ್ ಚೇಸ್ ಮಾಡಿ ಹಲ್ಲೆ ಮಾಡಲಾಗಿದೆ. ಕಾರ್ ಅಡ್ಡ ಹಾಕಿ ಚಾಲಕನ ಜೊತೆ ಯುವಕರು ಹಲ್ಲೆ ಮಾಡಿದ್ದಲ್ಲದೇ ಅಪಾರ್ಟ್ಮೆಂಟ್ಗೆ ನುಗ್ಗಿ ಕುಟುಂಬಸ್ಥರ ಮೇಲೂ ಅಟ್ಯಾಕ್ ಮಾಡಲಾಗಿದೆ. ಆಟವಾಡ್ತಿದ್ದ ಮಗು ಮೇಲೆ ಕಾರು ಚಲಿಸಿದ ಪರಿಣಾಮ 6 ವರ್ಷದ ಮಗು ದುರ್ಮರಣಕ್ಕಿಡಾಗಿದೆ. ಪೆಟ್ರೋಲ್ ಬಂಕ್ನಲ್ಲಿದ್ದ ಸ್ಕೂಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಹಿಳಾ ಸಿಬ್ಬಂದಿಯಿಂದ ಭಾರಿ ಅನಾಹುತ ತಪ್ಪಿದೆ. ಬಂಕ್ ಮಹಿಳಾ ಸಿಬ್ಬಂದಿ ಧೈರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇವು ಸೇರಿದಂತೆ ಹತ್ತು ಹಲವು ವೈರಲ್ ವಿಡಿಯೋಗಳು ಇಲ್ಲಿವೆ.