May 28, 2023, 12:53 PM IST
ನೂತನ ಸಂಸತ್ ಭವನ ಪ್ರಧಾನಿ ಮೋದಿಯಿಂದ ಲೋಕಾರ್ಪಣೆಯಾಗಿದೆ. ಉದ್ಘಾಟನೆ ಹೊತ್ತಲ್ಲಿ ಭಾರತದ ಗತವೈಭವ ನೆನಪಿಸುವ ಅಪರೂಪದ ವಸ್ತುವೊಂದು ಇಡೀ ಜಗತ್ತಿನ ಕೇಂದ್ರಬಿಂದು ಆಗಿದೆ. ಅದೇ ಸೆಂಗೋಲ್. ಸ್ವರ್ಣ ಖಚಿತ ರಾಜದಂಡ. ಆದ್ರೆ ಇದೊಂದು ಸೆಂಗೋಲ್ ಬಗ್ಗೆ ಅನೇಕ ಅನುಮಾನಗಳು, ಚರ್ಚೆಗಳು ಶುರುವಾಗಿದೆ. ಕೇಂದ್ರ ಸರ್ಕಾರ ಸೆಂಗೋಲ್ ಬಗ್ಗೆ ಸಿಕ್ಕ ಮಾಹಿತಿ ಜಾಲಾಡಿ ಕಲೆ ಹಾಕಿದೆ. ಮೋದಿ ಆಫೀಸಿಗೆ ಬಂದ ಪತ್ರದಲ್ಲಿನ ವಿಷಯ ಅದೆಷ್ಟು ಗಟ್ಟಿಯಾಗಿತ್ತು ಅಂದ್ರೆ ಸ್ವತಃ ಮೋದಿ ಸೆಂಗೋಲ್ ಬಗ್ಗೆ ಆಸಕ್ತಿ ವಹಿಸ್ತಾರೆ. ಸೆಂಗೋಲ್ ಇತಿಹಾಸವನ್ನ ಜಾಲಾಡೋಕೆ ಒಂದು ಟೀಮ್ ಕಟ್ತಾರೆ. ಮೂಲ ಹಾಗೂ ಹಿನ್ನಲೆ ಏನು ಅನ್ನೋದನ್ನ ತಿಳಿದ ಮೇಲೆ ಸೆಂಟ್ರಲ್ ವಿಸ್ಟಾದಲ್ಲಿ ಸ್ಥಾಪಿಸೋ ನಿರ್ಧಾರಕ್ಕೆ ಬರಲಾಗುತ್ತದೆ. ಸೆಂಟ್ರಲ್ ವಿಸ್ಟಾ ನರೇಂದ್ರ ಮೋದಿಯವರ ಬಹುನಿರೀಕ್ಷಿತ ನಿರ್ಮಾಣಗಳಲ್ಲಿ ಒಂದು. ಇದು ದೇಶದ ಹೆಮ್ಮೆ ಅಂದ್ರೂ ತಪ್ಪಾಗೋದಿಲ್ಲಾ.
ಇದನ್ನೂ ವೀಕ್ಷಿಸಿ: ಹಿಂದೂಗಳ ಪವಿತ್ರ ಸ್ಥಳಗಳಲ್ಲಿ ಒಂದು ಅಯೋಧ್ಯೆ : ಇದರ ಇತಿಹಾಸ, ಮಹತ್ವವೇನು ?