Jan 8, 2025, 11:58 AM IST
ಬೆಂಗಳೂರು(ಜ.08): ಇತಿಹಾಸಕ್ಕೆ ಸಾಕ್ಷಿಯಾಗ್ಬೇಕಿದ್ದ ಮಹಲ್ ಅನಾಥವಾಗಿದ್ದೇಕೆ?, ಕಗ್ಗಾಡಿನ ಮಧ್ಯೆ ಬಿಕ್ಕಳಿಸಿ ಅಳುತ್ತಿದೆ ಮಾಲ್ಚಾ ಮಹಲ್. ಈ ಎಲ್ಲಾ ಪ್ರಶ್ನೆಗಳಿಗೆ ನಾವಿವತ್ತು ಉತ್ತರ ಹುಡುಕೊ ಕೆಲಸ ಮಾಡಣ. ಆದ್ರೆ ಆ ಉತ್ತರ ಹುಡುಕೋದು ಎಷ್ಟು ಕಷ್ಟಾನೋ, ಆ ಉತ್ತರ ಸಿಕ್ಕಮೇಲೆ ಅದನ್ನ ನಂಬೋದೂ ಅಷ್ಟೆ ಕಷ್ಟ.. ಈ ಇಷ್ಟಕಷ್ಟಗಳ ಬಗ್ಗೆ ಯಾಕಿಷ್ಟು ಮಾತಾಡ್ತಿದೀವಿ ಅನ್ನೋದು ಗೊತ್ತಾಗ್ಬೇಕು ಅಂದ್ರೆ, ನೀವೂ ನಮ್ಮ ಜೊತೆ ಆ ರಹಸ್ಯ ತಾಣಕ್ಕೆ ಬರ್ಬೇಕು.. ಅದು ಹೇಳೋ ಇತಿಹಾಸದ ಕತೆಗೆ ಕಿವಿ ಕೊಡ್ಬೇಕು. ಎಂಥವರನ್ನೂ ನಡುಗಿಸೋ ಅದರ ಘಟನೆಗಳನ್ನ ಕೇಳ್ಬೇಕು.. ಈಗ ಅಲ್ಲಿಗೇ ಹೋಗಣ ಬನ್ನಿ..
ವೀಕ್ಷಕರೇ.. ಅವತ್ತು ಆ ಘಟನೆ ಹೇಗೆ ನಡೆದಿರ್ಬೋದು ಅಂತ ಸ್ವಲ್ಪ ಇಮ್ಯಾಜಿನ್ ಮಾಡ್ಕೊಂಡ್ ನೋಡಿ. ಇಲ್ಲ.. ಅದನ್ನ ಕಲ್ಪನೆ ಮಾಡ್ಕೊಳೋಕೂ ಸಾಧ್ಯ ಇಲ್ಲ.. ಅಷ್ಟು ಭಯಂಕರ ಸಂಗತಿ ಅದು.. ಅಷ್ಟಕ್ಕೂ ಅಲ್ಲಿ ನಡೆದ ಆ ದುರಂತಕ್ಕೂ, ಈಗ ಜನ ಹೇಳ್ತಾ ಇರೋ ಭೂತದ ಕತೆಗೂ, ಅಲ್ಲಾಗೋ ಚಿತ್ರ ವಿಚಿತ್ರ ಅನುಭವಕ್ಕೂ ಏನು ಸಂಬಂಧ? ಹೇಗೆ ಸಂಬಂಧ? ಅಸಲಿಗೆ, ಆ ಕುಟುಂಬದವರು ಈಗ ಯಾರಾದ್ರೂ ಬದುಕಿದಾರಾ? ಅದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ನಿಮ್ಮ ಮುಂದಿಡ್ತೀವಿ.
ಡಿಕೆ ಬ್ರದರ್ಸ್ ಹೆಸರೇ ಬಂಡವಾಳ, ಶ್ರೀಮಂತರಿಗೆ ಗಾಳ: ಬಗೆದಷ್ಟು ಬಯಲಾಗ್ತಿದೆ ಐಶ್ವರ್ಯ ವಂಚನೆ ಪುರಾಣ
ದೆಹಲಿಯ ಮಾಲ್ಚಾ ಮಾರ್ಗ್ ಕಡೆ ಹೊರಟರೆ ಸಾಕು, ಅಪಾಯದ ಕಡೆ ಪ್ರಯಾಣ ಮಾಡ್ತಾ ಇದೀವಿ ಅನ್ನೋ ಭಾವನೆ ಬರುತ್ತಂತೆ.. ಆ ಮಹಲ್ ಇರೋ ರಸ್ತೆಲಿ ಸಂಜೆ 6 ಗಂಟೆ ಮೇಲೆ ಯಾರೂ ಹೋಗೋ ಹಾಗಿಲ್ಲ, 9 ಗಂಟೆ ಮೇಲೆ ಅಪ್ಪಿ ತಪ್ಪಿ ಕೂಡ ಇರೋ ಹಾಗಿಲ್ಲ ಅಂತ, ಸರ್ಕಾರವೇ ಆದೇಶ ಮಾಡಿದ್ಯಂತೆ.. ಹಾಗಾದ್ರೆ, ಈ ಮಾಲ್ಚಾ ಮಹಲ್ ರಹಸ್ಯ ಸರ್ಕಾರವನ್ನೇ ಹೆದರಿಸಿದ್ಯಾ? ಅಥವಾ ಅದರ ಹಿಂದೆ ಬೇರೊಂದು ಕತೆ ಅಡಗಿದ್ಯಾ?. ಈ ನಂಬಿಕೆ ಎಷ್ಟು ನಿಜ? ಸರ್ಕಾರ ಕೂಡ ಅಲ್ಲಿಗೆ ಹೋಗೋಗೆ ನಿರ್ಭಂಧ ಹೇರಿದೆ ಅಂದ್ರೆ, ಅದಕ್ಕೇನೋ ಕಾರಣ ಇರ್ಲೇಬೇಕು ಅಲ್ವಾ? ಏನು ಆ ಕಾರಣ? ನೋಡೋಣ.
ಮಾಲ್ಚಾ ಮಹಲಿನಲ್ಲಿದ್ದ ಆ ಕುಟುಂಬಕ್ಕೆ ಯಾರೂ ಬೇಕಿರ್ಲಿಲ್ಲ, ಆ ಕುಟುಂಬಕ್ಕೂ ಅಷ್ಟೆ, ಯಾರೊಬ್ಬರೂ ಬೇಕಾಗಿರ್ಲಿಲ್ಲ. ಮನುಷ್ಯ ಮುಖ ನೋಡಿದ್ರೆ ಸಾಕು, ಆ ಮನೆ ಮಂದಿ ಉರಿದುಬೀಳ್ತಿದ್ರು ಅಂತಾರೆ. ಈಗ, ಅದೇ ಮನೆ ಮುಂದೆ ಯಾರಾದ್ರೂ ಹೋದ್ರೆ, ಆತ್ಮಗಳ ಕಾಟ ಶುರುವಾಗಿದ್ಯಂತೆ.