Samvaad: ಭಾರತದ ಸಂಸ್ಕೃತಿ ಪ್ರಭಾವ ನನ್ನ ಮೇಲಿದೆ, ನಾನೆಂದು ಬೀಫ್‌ ತಿಂದಿಲ್ಲ, ತಿನ್ನೋದು ಇಲ್ಲ: ಎಸ್‌ವೈ ಖುರೇಷಿ!

Samvaad: ಭಾರತದ ಸಂಸ್ಕೃತಿ ಪ್ರಭಾವ ನನ್ನ ಮೇಲಿದೆ, ನಾನೆಂದು ಬೀಫ್‌ ತಿಂದಿಲ್ಲ, ತಿನ್ನೋದು ಇಲ್ಲ: ಎಸ್‌ವೈ ಖುರೇಷಿ!

Published : Oct 16, 2022, 07:09 PM IST

 ಇತ್ತೀಚೆಗೆ ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗ್ವತ್‌ ಮುಸ್ಲಿಂ ಮುಖಂಡರನ್ನು ಭೇಟಿಯಾಗಿದ್ದು ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಆದರೆ, ಇಡೀ ವಿಚಾರದ ಹಿಂದೆ ಇದ್ದಿದ್ದು ಮಾಜಿ ಚುನಾವಣಾ ಆಯುಕ್ತ ಎಸ್‌ವೈ ಖುರೇಷಿ. ಈ ಕುರಿತಾಗಿ ಅವರು ಏಷ್ಯಾನೆಟ್‌ ಸಂವಾದದಲ್ಲಿ ಮಾತನಾಡಿದ್ದಾರೆ.
 


ಬೆಂಗಳೂರು (ಅ.16): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಕಳೆದ ಒಂದು ತಿಂಗಳಲ್ಲಿ ಎರಡು ಬಾರಿ ಮುಸ್ಲಿಂ ಮುಖಂಡರನ್ನು ಭೇಟಿಯಾಗಿದ್ದರು. ಆದರೆ, ಈ ಭೇಟಿಯ ಹಿಂದಿನ ರೂವಾರಿ, ಮಾಜಿ ಚುನಾವಣಾ ಆಯುಕ್ತ ಎಸ್‌ವೈ ಖುರೇಷಿ ಹಾಗೂ ಇತರ ನಾಲ್ಕು ಮಂದಿ. ಈ ವಿಚಾರವಾಗಿ ಅವರು ಏಷ್ಯಾನೆಟ್‌ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಭೇಟಿಯ ವೇಳೆ ನಾವು ಕೆಲವೊಂದು ವಿಚಾರಗಳನ್ನು ಆರೆಸ್ಸೆಸ್‌ (RSS) ಮುಖ್ಯಸ್ಥರಿಗೆ ಹೇಳಿದ್ದೇವೆ. ಹಾಗಂತ ನಾವು ಮುಸ್ಲಿಂ (Muslim) ಸಮುದಾಯದ ಪ್ರತಿನಿಧಿಗಳಲ್ಲ. ಹಿಂದು-ಮುಸ್ಲಿಮರ ದ್ವೇಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ವೈಯಕ್ತಿಕಗಾಗಿ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಟ್ಟಿದ್ದೇವೆ ಎಂದು ಹೇಳಿದರು. ಈ ವೇಳೆ ಮೋಹನ್‌ ಭಾಗ್ವತ್‌ (Mohan Bhagwat) ಅವರು 'ಗೋಹತ್ಯೆ' ವಿಚಾರವನ್ನೂ ಪ್ರಸ್ತಾಪ ಮಾಡಿದ್ದಾರೆ. ಹಿಂದುಗಳು ಗೋವನ್ನು ಪರಮಪೂಜ್ಯ ಎಂದು ಭಾವಿಸುತ್ತಾರೆ. ಈ ವಿಚಾರದ ಬಗ್ಗೆ ಮೌಲ್ವಿಗಳೊಂದಿಗೆ ಮಾತನಾಡಿದ್ದಾರೆ.

ಆರೆಸ್ಸೆಸ್‌ ಚೀಫ್‌ ಮೋಹನ್‌ ಭಾಗವತ್‌, ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ: ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ!

ಈ ವೇಳೆ ಮಾತನಾಡಿದ ಎಸ್‌ವೈ ಖುರೇಷಿ, ಮೋಹನ್‌ ಭಾಗ್ವತ್‌ ಅವರು (Cow Slaughter) ಮಾತನ್ನು ನಾನು ಒಪ್ಪುತ್ತೇನೆ. ವಿಶ್ವದ ಹಲವು ದೇಶಗಳಲ್ಲಿ ಗೋಹತ್ಯೆ ನಿಷೇಧವಿದೆ. ನಾನು ಮುಸ್ಲಿಂ. ನಮ್ಮಲ್ಲಿ ಬೀಫ್‌ ತಿನ್ನುವ ಬಗ್ಗೆ ಯಾವುದೇ ಅಡ್ಡಿಗಳಿಲ್ಲ. ಆದರೆ, ಭಾರತದ ಸಂಸ್ಕೃತಿಯಲ್ಲಿ ಬೆಳೆದವನು ನಾನು. ಆ ಕಾರಣದಿಂದಾ ಕಳೆದ 50 ವರ್ಷಗಳಲ್ಲಿ ಭಾರತದಲ್ಲಾಗಲಿ, ವಿದೇಶದಲ್ಲಾಗಲಿ ನಾನು ದನದ ಮಾಂಸ ತಿಂದಿಲ್ಲ. ನನ್ನ ಬಹಳಷ್ಟು ಸ್ನೇಹಿತರು ಹಿಂದುಗಳು. ಅವರು ಬೀಫ್‌ ತಿನ್ನೋದಿಲ್ಲ ಅದನ್ನು ನಾನೂ ಅಭ್ಯಾಸ ಮಾಡಿಕೊಂಡಿದ್ದೇನೆ' ಎಂದು ಹೇಳಿದ್ದಾರೆ.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?