Jun 10, 2023, 2:11 PM IST
ಮಾಸ್ಕೋ(ಜೂ.10): ಎಂಜಿನ್ ಸಮಸ್ಯೆಯಿಂದ ರಷ್ಯಾದ ಮಗದನ್ ವಿಮಾನ ನಿಲ್ದಾಣದಲ್ಲಿ ದೆಹಲಿ-ಸ್ಯಾನ್ ಫ್ರಾನ್ಸಿಸ್ಕೊ ಏರ್ ಇಂಡಿಯಾ ವಿಮಾನ ಲ್ಯಾಂಡ್ ಮಾಡಲಾಗಿತ್ತು. ರಷ್ಯಾದಲ್ಲಿ ಸಿಲುಕಿದ್ದ ಏರ್ ಇಂಡಿಯಾ ಪ್ರಯಾಣಿಕರು ಗಾಯಂತ್ರಿ ಮಂತ್ರ ಪಠಿಸಿ ಗಮನಸೆಳೆದಿದ್ದಾರೆ. ಬಾಲಿವುಡ್ ನಟರಾದ ಮಿಥುನ್ ಚಕ್ರವರ್ತಿ ಹಾಗೂ ರಾಮ್ ಕಪೂರ್ ಪ್ರಸಿದ್ಧ ಹಾಡುಗಳನ್ನೂ ಗುನುಗಿದ್ದಾರೆ. ಇದೇ ವೇಳೆ ಸ್ಥಳೀಯ ರಷ್ಯನ್ ಮಹಿಳೆಯೊಬ್ಬರು ಸಹಾಯ ಮಾಡಿದ್ದು ಭಾರತ- ರಷ್ಯಾ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಭಾರತೀಯರಿಗೆ ಸಹಾಯ ಮಾಡಲು ನಾನು ಬಂದಿದ್ದೇನೆ. ಈ ಘಟನೆ ಭಾರತದಲ್ಲಾಗಿದ್ದರೆ ಭಾರತೀಯರು ಖಂಡಿತವಾಗಿ ನಮಗೆ ಸಹಾಯ ಮಾಡುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ. ಭಾರತೀಯ ಸಿನಿಮಾ ರಂಗದ ಬಗ್ಗೆ ಮಾತನಾಡಿದ ಮಹಿಳೆ ಮಿಥುನ್ ಚಕ್ರವರ್ತಿ & ರಾಜ್ ಕಪೂರ್ ಬಗ್ಗೆಯೂ ಮಾತನಾಡಿದ್ದಾರೆ. ಮಗದನ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ದೆಹಲಿ-ಸ್ಯಾನ್ ಫ್ರಾನ್ಸಿಸ್ಕೊ ಏರ್ ಇಂಡಿಯಾ ವಿಮಾನದ ಪ್ರಯಾಣಿಕರನ್ನು ಗುರುವಾರ ಬದಲಿ ವಿಮಾನದ ಮೂಲಕ ಸ್ಯಾನ್ ಫ್ರಾನ್ಸಿಸ್ಕೊಗೆ ತಲುಪಿಸಲಾಗಿದೆ