
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕಾರ ಮತ್ತು ಹಿಂದುತ್ವದ ಅಲೆ ಬಲಪಡಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹೊಸ ಕಾರ್ಯತಂತ್ರ ರೂಪಿಸುತ್ತಿದೆ
ನವದೆಹಲಿ (ಡಿ.5): ಭಾರತದ ರಾಜಕೀಯದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕಾರ ಮತ್ತು ಹಿಂದುತ್ವದ ಅಲೆಯನ್ನು ಮತ್ತಷ್ಟು ಬಲಪಡಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮಹತ್ವದ ಕಾರ್ಯತಂತ್ರವನ್ನು ಹೆಣೆಯುತ್ತಿದೆ.
ಭವ್ಯ ರಾಮಮಂದಿರದ ಮೇಲೆ ರಾರಾಜಿಸಿದ ಭಗವಾಧ್ವಜ; ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
ಹರಿಯಾಣ ಮತ್ತು ಮಹಾರಾಷ್ಟ್ರದ ಗೆಲುವುಗಳ ನಂತರ, RSS ನ ಸಂಪೂರ್ಣ ಗಮನ ಈಗ ಉತ್ತರ ಪ್ರದೇಶದ ಮೇಲೆ ಕೇಂದ್ರೀಕೃತವಾಗಿದೆ. ಯೋಗಿ ಆದಿತ್ಯನಾಥ್ ಅವರ ವರ್ಚಸ್ಸು ಮತ್ತು ಹಿಂದುತ್ವದ ಅಜೆಂಡಾಕ್ಕೆ RSS ನ ಸಾಂಸ್ಥಿಕ ಬಲವು ಬೆಂಬಲವಾಗಿ ನಿಂತಿದೆ.
ಉತ್ತರ ಪ್ರದೇಶದ ಪ್ರತಿ ಮೂಲೆಯಲ್ಲಿ ಬಿಜೆಪಿ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಂಘವು ಗುಪ್ತಗಾಮಿನಿಯಂತೆ ತನ್ನ ಕಾರ್ಯವನ್ನು ಪ್ರಾರಂಭಿಸಿದೆ. ಹೊಸ ವರ್ಷದ ಆರಂಭದಲ್ಲಿಯೇ ಯೋಗಿ ಅವರ ರಾಜಕೀಯ ಬತ್ತಳಿಕೆಗೆ RSS ನಿಂದ ಹೊಸ "ಬ್ರಹ್ಮಾಸ್ತ್ರ" ಸೇರ್ಪಡೆಯಾಗುತ್ತಿದೆ.