ಮೋದಿ ಭಾರತೀಯರ ಸುರಕ್ಷತೆ ಬಗ್ಗೆ ಬದ್ಧತೆ ಹೊಂದಿರುವ ನಾಯಕ: ರಾಜೀವ್ ಚಂದ್ರಶೇಖರ್

ಮೋದಿ ಭಾರತೀಯರ ಸುರಕ್ಷತೆ ಬಗ್ಗೆ ಬದ್ಧತೆ ಹೊಂದಿರುವ ನಾಯಕ: ರಾಜೀವ್ ಚಂದ್ರಶೇಖರ್

Published : Nov 18, 2023, 11:17 AM IST

ಭಾರತ-ಚೀನಾ ಯುದ್ಧದ ಬಗ್ಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿದ್ದು, ಹಿಂದಿ, ಚೀನಿ ಭಾಯಿ ಭಾಯಿ ನೀತಿಯೇ ಭಾರತದ ಹಿನ್ನಡೆಗೆ ಕಾರಣ ಎಂದು ವಾಗ್ದಾಳಿ ನಡೆಸಿದರು.
 

ಕಾಂಗ್ರೆಸ್ ನೇತೃತ್ವದ ಅಂದಿನ ದುರ್ಬಲ ರಾಜಕೀಯ ನಾಯಕತ್ವದಿಂದಾಗಿ 1962ರ ಭಾರತ-ಚೀನಾ(India-China) ಯುದ್ಧ ದೇಶದ ಇತಿಹಾಸದಲ್ಲಿ ಕರಾಳ ಮತ್ತು ಅವಮಾನಕರ ಅಧ್ಯಾಯನ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar) ಹೇಳಿದ್ದಾರೆ. ಅಕ್ಟೋಬರ್ 20 ರಿಂದ ನವೆಂಬರ್ 21, 1962ರವರೆಗೆ ಇತಿಹಾಸದಲ್ಲಿ ಕರಾಳ ದಿನವಾಗಿತ್ತು. ಅಂದು ಭಾರತ ಅನುಭವಿಸಿದ ಹಿನ್ನಡೆಗೆ ಹಿಂದಿ, ಚೀನಿ ಭಾಯಿ ಭಾಯಿ ನೀತಿಯೇ ಕಾರಣ ಅಂತಾ ವಾಗ್ದಾಳಿ ನಡೆಸಿದ್ರು. ಅಷ್ಟೇ ಅಲ್ಲ ಕಾಂಗ್ರೆಸ್(Congress) ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಂದಿನ ಯುದ್ಧದಲ್ಲಿ ಮರಣ ಹೊಂದಿದವರನ್ನು ಭಾರತಕ್ಕೆ ಕರೆತರುವಲ್ಲಿ ಪಟ್ಟ ಸಾಹಸವನ್ನ ನಮ್ಮ ತಂದೆ ಎಂ.ಕೆ. ಚಂದ್ರಶೇಖರ್ ಬಿಚ್ಚಿಟ್ಟಿದ್ದಾರೆ ಅಂತಾ ಹೇಳಿದ್ರು. ಇದರ ಜೊತೆ  ಬರಿ ಕೈಗಳಿಂದಲೂ ವೀರಾವೇಶದಿಂದ ಹೋರಾಡಿದ್ರಿಂದ ಭಾರೀ ಸಾವು ನೋವುಗಳು ಉಂಟು ಆಗಿತ್ತು. ಅಲ್ಲದೇ ವೀರರು ಭಾರತವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಬಲಿಕೊಟ್ಟ ಕಥೆ ನಮ್ಮ ಮುಂದಿದೆ ಅಂತಾ ಹೇಳಿದ್ದಾರೆ. ನಮ್ಮ ಭವಿಷ್ಯವನ್ನು ವಿಕಸಿತ ಭಾರತ ಎಂದು ನೋಡುತ್ತಿರುವಾಗ ದುರ್ಬಲ ನಾಯಕತ್ವ ಅದನ್ನ ಹಾಳು ಮಾಡಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಆರ್ಥಿಕ ಬೆಳವಣಿಗೆ ಬಡತನ ಮುಕ್ತ ಭಾರತದ ನಮ್ಮ ಆಕಾಂಕ್ಷೆಗಳಿಗೆ ಬಲವಾದ ಭದ್ರತೆ ಸಿಕ್ಕಿದೆ. ಕಳೆದ 9 ವರ್ಷಗಳಿಂದ ಒಬ್ಬ ಸಮರ್ಥ ನಾಯಕತ್ವವನ್ನ ಭಾರತ ಹೊಂದಿದೆ ಎಂದ ರಾಜೀವ್ ಚಂದ್ರಶೇಖರ್ ಎಲ್ಲ ಭಾರತೀಯರನ್ನು ಸುರಕ್ಷಿತಗೊಳಿಸುವ ತನ್ನ ಬದ್ಧತೆಯನ್ನು ಪ್ರತಿಪಾದಿಸುವ ನಾಯಕ ಅಂದ್ರೆ ಅದು ಮೋದಿ ಎಂದು ಶಾಘ್ಲಿಸಿದ್ದಾರೆ. ಇದರ ಜೊತೆ ಮೋದಿ ನಾಯಕತ್ವದಲ್ಲಿ ಸೈನಿಕ ಪಡೆಗೆ ದೊಡ್ಡ ಬಲ ಬಂದಿದ್ದು, ಅವರ ನೇತೃತ್ವದಲ್ಲಿ ಆಧುನಿಕ ಶಸ್ತಾಸ್ತ್ರಗಳು, ಸೈನಿಕರಿಗೆ ಮೂಲ ಸೌಕರ್ಯ ಸಿಕ್ತಿದ್ದು ದೇಶ ದೊಡ್ಡ ಆಧುನಿಕರಣದತ್ತ ಸಾಗುತ್ತಿದೆ. ಇಂಥಾ ನಾಯಕತ್ವ ಎಂದಿಗೂ ಕಳೆದುಕೊಳ್ಳಬಾರದು ಅಂತಾ ಮನವಿ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಸೋಷಿಯಲ್ ಮೀಡಿಯಾದಲ್ಲಿ ಡೀಪ್‌ಫೇಕ್ ಸಂಚಲನ: ಪ್ರಧಾನಿ ಮೋದಿಯನ್ನೂ ಬಿಟ್ಟಿಲ್ಲ ಈ ವಿಡಿಯೋ !

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more