ಅಬುದಾಭಿಯಲ್ಲಿ ನಿರ್ಮಾಣವಾಗಿರುವ ಬಾಪ್ಸ್ ಮಂದಿರ ಭಾರತ ಹಾಗೂ ಯುಎಇ ನಡುವಿನ ಬಂಧವನ್ನು ಇನ್ನಷ್ಟು ಬಿಗಿ ಮಾಡಿದೆ.
ನವದೆಹಲಿ (ಫೆ.14): ಅರಬ್ಬರ ನಾಡಲ್ಲಿ ಪ್ರಧಾನಿ ಮೋದಿ ಅಬ್ಬರಿಸಿದ್ದಾರೆ. ಇಂದು ಅಬುದಾಭಿಯಲ್ಲಿ ನಿರ್ಮಾಣವಾಗಿರುವ ಬಾಪ್ಸ್ ಮಂದಿರ ಭಾರತ ಹಾಗೂ ಯುಎಇ ನಡುವಿನ ಬಂಧವನ್ನು ಇನ್ನಷ್ಟು ಬಿಗಿ ಮಾಡಿದೆ. ಕಳೆದ 10 ವರ್ಷಗಳಲ್ಲಿ 7 ಬಾರಿ ಯುಎಇಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಈ ಬಾರಿ 8 ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಖಂಡಿತವಾಗಿ ಮುಸ್ಲಿಂ ರಾಷ್ಟ್ರಗಳಿಗೆ ಒಂದು ಸಂದೇಶವನ್ನೂ ಈ ದೇಗುಲ ರವಾನಿಸಲಿದೆ. 9 ವರ್ಷಗಳ ಸ್ನೇಹದಿಂದ ಮೋದಿ ಏನು ಸಾಧಿಸಿದ್ದಾರೆ ಎನ್ನುವುದಕ್ಕೆ ಉತ್ತರ ಎನ್ನುವ ರೀತಿಯಲ್ಲಿ ಇದು ನಿರ್ಮಾಣವಾಗಿದೆ. ಈಗ ಭಾರತ ಮಾತ್ರವಲ್ಲ ಯುಎಇಯಲ್ಲೂ ಕೂಡ ರುಪೇ ಯುಪಿಐ ಕೆಲಸ ಮಾಡಲಿದೆ.
ಮುಸ್ಲಿಂ ರಾಷ್ಟ್ರ ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನದ ಅತ್ಯಾಕರ್ಷಕ ಒಳಾಂಗಣ ಚಿತ್ರಗಳು!
ಮುಸ್ಲಿಂ ದೇಶವೊಂದರಲ್ಲಿ, ಇಡೀ ಪಶ್ಚಿಮ ಏಷ್ಯಾದಲ್ಲೇ ಇಲ್ಲದಷ್ಟು ವಿಶಾಲವಾದ ದೇವಾಲಯವೊಂದು ನಿರ್ಮಾಣವಾಗಿದೆ.. ಇದು ಬರೀ ಧಾರ್ಮಿಕ ಸ್ಥಳವಾಗಿ ಮಾತ್ರವೇ ಅಲ್ಲ.. ಅದನ್ನೂ ಮೀರಿದ ಮಹತ್ತರ ತಾಣವಾಗಿ ವಿಜೃಂಭಿಸಲಿದೆ.. ಅದಕ್ಕೆ ಹತ್ತಾರು ಕಾರಣಗಳೂ ಇವೆ.