Farm Laws Repealed : ಪ್ರಧಾನಿ ಮೋದಿ ಮಹಾ ನಿರ್ಧಾರಕ್ಕೆ ಜನ ಕೊಟ್ಟ ಮಾರ್ಕ್ಸ್‌ ಎಷ್ಟು?

Nov 23, 2021, 11:22 AM IST

ನವದೆಹಲಿ(ನ.23): ಪ್ರಧಾನಿ ನರೇಂದ್ರ ಮೋದಿ (Narendra Modi) ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು  ದಿಢೀರನೆ ಹಿಂಪಡೆದಿದ್ದರಿಂದ (Farm laws repealed) ಅವರ ವರ್ಚಸ್ಸಿಗೆ ಕೊಂಚ ಹಿನ್ನಡೆಯಾಗಿದೆ ಎಂಬ ವಿಶ್ಲೇಷಣೆಗಳು ಸುಳ್ಳು ಎಂದು ಸಮೀಕ್ಷೆಯೊಂದು (Survey) ಹೇಳಿದೆ. ನರೇಂದ್ರ ಮೋದಿ ಅವರು ರೈತಪರ ಪ್ರಧಾನಿ. ಕೃಷಿ ಕಾಯ್ದೆಯನ್ನು ಹಿಂಪಡೆದ ಅವರ ನಿರ್ಧಾರ ಸೂಕ್ತವಾಗಿಯೇ ಇದೆ ಎಂಬುದು ಬಹುತೇಕ ಮಂದಿಯ ಅಭಿಪ್ರಾಯವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ, ಮೋದಿ ಸರ್ಕಾರ ರೈತಪರ : ಸಮಿಕ್ಷೇ!

ನ.19ರಂದು ಮೋದಿ ಅವರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆವ ಘೋಷಣೆ ಮಾಡಿದ ಕೆಲವೇ ತಾಸಿನ ಬೆನ್ನಲ್ಲೇ ಸಿ-ವೋಟರ್‌ ಸಂಸ್ಥೆ ದೇಶಾದ್ಯಂತ ಹಠಾತ್‌ ಸಮೀಕ್ಷೆಯೊಂದನ್ನು ನಡೆಸಿದೆ. ಅದರಲ್ಲಿ ಭಾಗಿಯಾದ ಶೇ.52 ಮಂದಿಯ ಪ್ರಕಾರ, ಕಾಯ್ದೆ ಹಿಂಪಡೆದ ಮೋದಿ ನಿರ್ಧಾರ ಸರಿಯಾಗಿಯೇ ಇದೆ. ಮತ್ತೊಂದೆಡೆ ಮೋದಿ ಸರ್ಕಾರ ರೈತಪರವಾಗಿದೆ ಎಂದು ಶೇ.58.6ರಷ್ಟುಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳು ರೈತರಿಗೆ ಅನುಕೂಲಕರವೇ ಆಗಿದ್ದವು ಎಂದು ಶೇ.50ಕ್ಕಿಂತ ಅಧಿಕ ಜನರು ಹೇಳಿದ್ದರೆ, ಶೇ.30.6ರಷ್ಟುಮಂದಿ ಮಾತ್ರ ತದ್ವಿರುದ್ಧ ಅಭಿಪ್ರಾಯ ತಿಳಿಸಿದ್ದಾರೆ.