Mar 3, 2022, 8:26 PM IST
ವಾರಣಾಸಿ (ಮಾ. 3): ಯುದ್ಧಪೀಡಿತ ಉಕ್ರೇನ್ (War torn Ukraine) ದೇಶದಿಂದ ಮರಳಿದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi,) ಗುರುವಾರ ವಾರಣಾಸಿಯಲ್ಲಿ ಮಾತುಕತೆ ನಡೆಸಿದರು. ಈ ವೇಳೆ ರಕ್ಷಣಾ ಕಾರ್ಯಾಚರಣೆಯ ಕುರಿತಾಗಿ ಮೋದಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಂದಾಜು 20 ಸಾವಿರಕ್ಕೂ ಅಧಿಕ ಭಾರತೀಯರು ಉಕ್ರೇನ್ ನ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು, ವೈದ್ಯಕೀಯ ಅಭ್ಯಾಸ ಮಾಡುವವರಾಗಿದ್ದಾರೆ. ಯುದ್ಧ ಆರಂಭವಾದ ಬಳಿಕ ಆದ ಮಾನಸಿಕ ಹಿಂಸೆಗಳು ಹಾಗೂ ಆತಂಕದ ಬಗ್ಗೆ ವಿದ್ಯಾರ್ಥಿಗಳು ಪ್ರಧಾನಿಗೆ ಮಾಹಿತಿ ನೀಡಿದರು.
ಭಾರತಕ್ಕೆ ಮರಳುವ ಆಸೆಯನ್ನೇ ಕೈಬಿಟ್ಟಿದ್ದೆವು. ಈ ವೇಳೆ ಸರ್ಕಾರ ಸಹಾಯಕ್ಕೆ ಧಾವಿಸಿತು ಎಂದು ವಿದ್ಯಾರ್ಥಿಗಳು ತಿಳಿಸಿದರು. ಮಾರ್ಚ್ 2 ರಂದು ಭಾರತಕ್ಕೆ ಮರಳುವ ವಿಮಾನವನ್ನು ಬುಕ್ ಮಾಡಿದ್ದೆವು. ಅದಕ್ಕೂ ಮುನ್ನವೇ ಯುದ್ಧ ಆರಂಭವಾಗಿತ್ತು. ಆದರೆ, ಭಾರತದ ರಾಯಭಾರ ಕಚೇರಿ (Indian Embassy) ಹಾಗೂ ಕೇಂದ್ರ ಸರ್ಕಾರ ನಮ್ಮ ನೆರವಿಗೆ ಬಂದಿತು ಎಂದು ವಿದ್ಯಾರ್ಥಿನಿಯೊಬ್ಬರು ಈ ವೇಳೆ ಹೇಳಿದರು.
Asianet Suvarna Focus ತನ್ನ ಕುಟುಂಬವನ್ನ ಬಚ್ಚಿಟ್ಟ ಪುಟಿನ್, ಸ್ಫೋಟಕ ರಹಸ್ಯ ಬಿಚ್ಚಿಟ್ಟ ರಷ್ಯಾ ಪ್ರೊಫೆಸರ್
ಉಕ್ರೇನ್ ಗಡಿಯನ್ನು ದಾಟಿದ ಬಳಿಕ ಭಾರತದ ರಾಯಭಾರ ಕಚೇರಿ ಸುರಕ್ಷಿತವಾಗಿ ನಮ್ಮನ್ನು ದೇಶಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿತು. ಆ ದೇಶದಲ್ಲಿ ಇನ್ನೂ ಸಿಲುಕಿಕೊಂಡಿರುವ ಭಾರತೀಯರನ್ನು ಯಶಸ್ವಿಯಾಗಿ ಭಾರತಕ್ಕೆ ವಾಪಸ್ ಕರೆತರುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.