ಅನ್ನದಾತನ ಅಭಿವೃದ್ಧಿಗೆ ಮೋದಿ ಮೈಲಿಗಲ್ಲು! ಕೃಷಿ ಕ್ರಾಂತಿಯ 11 ವರ್ಷದ ಸಾಧನೆಯ ಪಯಣ

ಅನ್ನದಾತನ ಅಭಿವೃದ್ಧಿಗೆ ಮೋದಿ ಮೈಲಿಗಲ್ಲು! ಕೃಷಿ ಕ್ರಾಂತಿಯ 11 ವರ್ಷದ ಸಾಧನೆಯ ಪಯಣ

Published : Jun 18, 2025, 03:24 PM IST

2014ರಿಂದ 2025ರವರೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೃಷಿ ಕ್ಷೇತ್ರದಲ್ಲಿ ಕೈಗೊಂಡ ಅಮೂಲಾಗ್ರ ಕ್ರಮಗಳು. ಸಿರಿಧಾನ್ಯಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದರಿಂದ ಹಿಡಿದು ಸಹಕಾರಿ ಕ್ಷೇತ್ರದಲ್ಲಿನ ಸುಧಾರಣೆಗಳವರೆಗೆ, ರೈತರ ಏಳಿಗೆಗೆ ಮೋದಿ ಸರ್ಕಾರದ ಕೊಡುಗೆಗಳನ್ನು ಒಳಗೊಂಡಿದೆ.

ನವದೆಹಲಿ (ಜೂ. 18): ಈ ವರ್ಷದ ಕೃಷಿ ಕ್ಷೇತ್ರದಲ್ಲಿ ನರೇಂದ್ರ ಮೋದಿ ಹೆಸರು ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, 2014ರಿಂದ 2025ರವರೆಗೆ ಭಾರತ ಕೃಷಿ ಉದ್ದೀಪನದಲ್ಲಿ ಕೈಗೊಂಡ ಹೆಜ್ಜೆಗಳು ಹಲವು. ರೈತನ ಬದುಕಿಗೆ ಹೊಸ ದಾರಿ ತೋರಿಸಲು ಈ ಸರ್ಕಾರ ಶ್ರಮಿಸಿದ್ದೇನು ಎಂಬುದರ ಧ್ವನಿಯೇ ಈ 11 ವರ್ಷದ ಸಾಧನೆಯ ಸರಪಳಿ ಇಲ್ಲಿದೆ.

ಹೊಸ ಅಧ್ಯಾಯದ ಪ್ರಾರಂಭ
ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾದಾಗ, ದೇಶವು ಹಲವು ಭ್ರಷ್ಟಾಚಾರದ ಹಗರಣಗಳಿಂದ ಮುಕ್ತಿಯಾಗಬೇಕಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಜನರ ಅಸಂತೋಷ ಸ್ಫೋಟಿಸಿ ಬಿಜೆಪಿ ಪಕ್ಷಕ್ಕೆ ಬಹುಮತ ನೀಡಿದಾಗ, ಜನರ ಆಶೆಯ ಬೆಳಕು ಮೋದಿ ಕೈಯಲ್ಲಿ ಇತ್ತು. ಮುಖ್ಯಮಂತ್ರಿಯಾಗಿ ಯಶಸ್ಸು ಕಂಡಿದ್ದ ಅವರು ಈಗ ದೇಶದ ನಾಯಕನಾಗಿ ಕೃಷಿ ವಲಯದ ಸಮಸ್ಯೆಗಳಿಗೆ ಪರಿಹಾರಗಳಿಗಾಗಿ ಮುಂದಾಗಿದ್ದರು.

ಅನ್ನದಾತನ ಶಕ್ತಿಗೆ ಬೆಂಬಲ
ಪ್ರಧಾನಿಯಾದ ಮೊದಲ ದಿನದಿಂದಲೇ ಕೃಷಿಕನ ಕಷ್ಟಗಳತ್ತ ಮುಖ ಮಾಡಿದ ಮೋದಿ ಸರ್ಕಾರ, ‘ಅನ್ನದಾತನ ಇಲ್ಲದೆ ದೇಶವೂ ಇಲ್ಲ’ ಎಂಬ ಸತ್ಯವನ್ನು ಆಳವಾಗಿ ಅರ್ಥಮಾಡಿಕೊಂಡಿತು. ಯೋಜನೆಗಳು ಕಾಗದದ ಮಟ್ಟಕ್ಕೆ ಸೀಮಿತವಿಲ್ಲದೆ ಜಾರಿಗೆ ಬಂದು, ‘ಬೀಜದಿಂದ ಬಜಾರ್ ತನಕ ರೈತನ ಜೊತೆಗೆ’ ಎಂಬ ಘೋಷಣೆಗೆ ಜೀವವನ್ನೂ ನೀಡಿದವು. ಭಾರತದಲ್ಲಿ ಬೆಳೆಯುವ ನೂರಾರು ಪ್ರಭೇದದ ಸಿರಿಧಾನ್ಯಗಳು ನ್ಯೂಟ್ರಿಷಿಯನ್‌ ಜೊತೆಗೆ ಆರೋಗ್ಯದ ಗುರಿಯಾಗಿವೆ. ಆದರೆ, ಇದನ್ನು ವಿಶ್ವಮಟ್ಟಕ್ಕೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಬೇಕಿತ್ತು. ಮೋದಿ ಸರ್ಕಾರವು 2023ನೇ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷವಾಗಿ ಘೋಷಿಸಲು ವಿಶ್ವಸಂಸ್ಥೆಯಲ್ಲಿ ಪ್ರಸ್ತಾವನೆ ಸಲ್ಲಿಸಿದಾಗ, 72 ದೇಶಗಳ ಬೆಂಬಲ ದೊರೆತಿತ್ತು. ಇದೇ ಮೋದಿ ನಾಯಕತ್ವದ ವಿಶ್ವವ್ಯಾಪಿ ದೃಷ್ಟಿಯ ತಕ್ಕ ಮೂಸೆಯಾಗಿದೆ.

ಭಾರತದ ಪ್ರಸ್ತಾವನೆಯಿಂದಲೇ ವಿಶ್ವಸಂಸ್ಥೆಯು 2023ನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿತು' ಎಂದು ಸ್ವತಃ ಮೋದಿ ಹೇಳಿದ್ದರು. ನಮ್ಮ ದೇಶದಲ್ಲಿ ಬೆಳೆದ ಧಾನ್ಯಗಳನ್ನು ಉಳಿಸಬೇಕು ಅಂದ್ರೆ ಸರಿಯಾದ ಸಂಗ್ರಹ ವ್ಯವಸ್ಥೆ ಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶ್ವದ ಅತಿದೊಡ್ಡ ಧಾನ್ಯ ಸಂಗ್ರಹ ಯೋಜನೆಗೆ ಚಾಲನೆ ನೀಡಿದರು. ಇದು ಪೂರೈಕೆ ಸರಪಳಿಯಲ್ಲಿ ಮಧ್ಯವರ್ತಿಗಳನ್ನು ಕಡಿಮೆ ಮಾಡಿ, ರೈತರಿಗೆ ನೇರ ಲಾಭ ತಲುಪಿಸಲಿದೆ.

ಸಹಕಾರದಿಂದ ಸಮೃದ್ಧಿ – ಮೈಲಿಗಲ್ಲುಗಳು
ಕೇಂದ್ರ ಸರ್ಕಾರ ಸಹಕಾರಿ ಕ್ಷೇತ್ರದಲ್ಲಿ ಈ ಸಾಧನೆಗಳನ್ನು ಮಾಡಿದೆ:
ERP ವ್ಯವಸ್ಥೆಗೆ 32,000ಕ್ಕೂ ಹೆಚ್ಚು ಪ್ಯಾಕ್ಸ್ (PACS) ಗಳನ್ನು ಸೇರಿಸಲಾಗಿದೆ
8.32 ಲಕ್ಷ ಸಹಕಾರಿ ಸಂಸ್ಥೆಗಳ ಡೇಟಾಬೇಸ್ ರೂಪಿಸಲಾಗಿದೆ
68 ಲಕ್ಷಕ್ಕೂ ಹೆಚ್ಚು ರೈತರಿಗೆ ರೂ. ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ
ಶ್ವೇತಕ್ರಾಂತಿ 2.0 ಮೂಲಕ ಡೈರಿ ಸಹಕಾರಿಗಳಿಗೆ ಉತ್ತೇಜನ
2025ರಲ್ಲಿಯೇ ಅಂತರಾಷ್ಟ್ರೀಯ ಸಹಕಾರಿ ವರ್ಷ ಎಂದು ಘೋಷಣೆ
ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ – ಭಾರತದ ಮೊದಲ ಸಹಕಾರಿ ಯೂನಿವರ್ಸಿಟಿ

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more