
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಸ್ಥಾನಕ್ಕೇರುವುದು ಖಚಿತವಾಗಿದೆ. ಜೂನ್ 9 ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಮೂರನೇ ಬಾರಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬೆಂಗಳೂರು (ಜೂ.6): ಹಿಂದಿನ ಎರಡು ಅವಧಿಯಲ್ಲಿನ ಮೋದಿ ಆಡಳಿತಕ್ಕೂ ಈ ಬಾರಿಯ ಮೋದಿ ಆಡಳಿತಕ್ಕೂ ಬದಲಾವಣೆ ಇರಲಿದೆ. ಎನ್‌ಡಿಎ ಮಿತ್ರಪಕ್ಷಗಳ ಪ್ರಮುಖ ಬೇಡಿಕೆಯೊಂದಿಗೆ ಮತ್ತೊಂದು ಟೆನ್ಶನ್ ಶುರುವಾಗಿದೆ. ಮೋದಿ ಸರ್ಕಾರದ ಪ್ರಮುಖ ಯೋಜನೆಗಳಿಗೆ ತಕರಾರು ಶುರು ಮಾಡಿದ್ದಾರೆ.
ಮೋದಿ ಸರ್ಕಾರದ ಅತ್ಯಂತ ಮಹತ್ವದ ಯೋಜನೆ ಆಗಿರುವ ಅಗ್ನಿಪಥ್‌ಗೆ ಜೆಡಿಯು ತಕರಾರರು ತೆಗೆದಿದೆ. ಇನ್ನೊಂದೆಡೆ ಮೂರನೇ ಅವಧಿಯ ಅಧಿಕಾರದಲ್ಲಿ ಬಿಜೆಪಿ ಈಡೇರಿಸಲು ಮುಂದಾಗಿರುವ ಯುಸಿಸಿ ಹಾಗೂ ಒಂದು ದೇಶ, ಒಂದು ಚುನಾವಣೆಗೆ ಬೆಂಬಲ ನೀಡಿದೆ ಎನ್ನಲಾಗಿದೆ.
ಎನ್‌ಡಿಎ ಸರ್ಕಾರ ಅಧಿಕಾರಕ್ಕೇರುವ ಮುನ್ನವೇ 'ಸ್ಟಾಕ್ ಅವ್ಯವಹಾರ' ಆರೋಪ ಮಾಡಿದ ರಾಹುಲ್ ಗಾಂಧಿ!
ಇನ್ನು ಎನ್‌ಡಿಎ ಮೈತ್ರಿಕೂಟದ ಸಂಖ್ಯಾಬಲ 302ಕ್ಕೆ ಏರಿಕೆಯಾಗಿದೆ. ಸರ್ಕಾರ ರಚನೆ ಸುಳಿವು ಸಿಗ್ತಿದ್ದಂತೆ 10 ಪಕ್ಷೇತರರ ಬೆಂಬಲ ಸಿಕ್ಕಿದೆ. ಪದಗ್ರಹಣಕ್ಕೂ ಮುನ್ನ ಪ್ರಬಲ ಖಾತೆಗೆ ನಿತೀಶ್, ನಾಯ್ಡು ಬಿಗಿಪಟ್ಟು ಇಟ್ಟಿದ್ದಾರೆ.