Feb 16, 2020, 12:57 PM IST
ವಾರಣಾಸಿ(ಫೆ.16): ವೀರಶೈವರ ಸಂತ ಪರಂಪರೆ ಸಿಕ್ಕಿದ್ದು ಭಾರತಕ್ಕೆ ಸಂದ ಗೌರವ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ವಾರಣಾಸಿಯಲ್ಲಿ ಇಂದು ನಡೆದ ಸಿದ್ಧಾಂತ ಶಿಖಾಮಣಿ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಕನ್ನಡದಲ್ಲೇ ಮಾತು ಆರಂಭಿಸಿದ್ದು ವಿಶೇಷವಾಗಿತ್ತು. ವೀರಶೈವ ಪದ ಆಧ್ಯಾತ್ಮದ ಜೊತೆ ಹೋಲಿಕೆಯಾಗುತ್ತದೆ ಎಂದು ಹೇಳಿದ ಪ್ರಧಾನಿ ಮೋದಿ, ವೀರಶೈವರು ಜನರಲ್ಲಿ ಮಾನವತ್ವದ ಭಾವನೆಗಳನ್ನು ಬೆರೆಸಿದವರು ಎಂದು ಹೇಳಿದರು. ಭಾರತದ ಪರಂಪರೆ ಉಳಿಸುವಲ್ಲಿ ವೀರಶೈವರ ಕೊಡುಗೆ ದೊಡ್ಡದು ಎಂದ ಪ್ರಧಾನಿ, ಸಿದ್ಧಾಂತ ಶಿಖಾಮಣಿಯಲ್ಲಿ 3 ಆಚರಣೆಗಳು ಕೆಲಸಕ್ಕೆ ಸಂಬಂಧಿಸಿವೆ ಎಂದು ಹೇಳಿದರು. ಈ ವೇಳೆ ಕರ್ನಾಟಕದ ಸಿಎಂ ಯಡಿಯೂರಪ್ಪ, ಕಾಶಿ ಮಠದ ವೀರಶೈವ ಸ್ವಾಮಿಜೀ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...