ಶತ್ರುಗಳನ್ನು ಹಿಮ್ಮೆಟ್ಟಿಸಿದ್ದು ಹೇಗೆ ಮೋದಿ ಇಟ್ಟ ಹೆಜ್ಜೆ?: Z-ಮೋರ್ ಸುರಂಗದಿಂದ ಎದುರಾಳಿಗೆ ಚೆಕ್ ಮೇಟ್!

Jan 16, 2025, 4:30 PM IST

ಭಾರತದ ಸುತ್ತಲೂ ಈಗ ಅಗ್ನಿಗೋಳವೇ ಹೊತ್ತಿಕೊಂಡಿದೆ. ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಹೀಗೆ ಯಾವ ದೇಶದ ಹೆಸರು ಹೇಳಿದ್ರು, ಅದು ನಮ್ಮ ನೆರೆರಾಷ್ಟ್ರಾನೋ ಅಥವಾ, ಶತ್ರುದೇಶಾನಾ ಅನ್ನೋ ಅನುಮಾನ ಹುಟ್ಟೊ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ್ಲೆನೇ, ಭಾರತದ ಗಡಿಗಳನ್ನ ಬಂದೋಬಸ್ತ್ ಮಾಡಕ್ಕೆ. ಪ್ರಧಾನಿ ನರೇಂದ್ರ ಮೋದಿ ಮುಂದಾಗಿದಾರೆ.. ಅವರು ರಚಿಸ್ತಾ ಇರೋ ವಿಚಿತ್ರ ಸ್ಟ್ರಾಟಜಿ, ದೇಶಕ್ಕೆ ದೊಡ್ಡ ರಕ್ಷಣೆ ಒದಗಿಸೋ ಎಲ್ಲಾ ಸಾಧ್ಯತೆನೂ ದಟ್ಟವಾಗಿದೆ.. ಅಷ್ಟಕ್ಕೂ ಆ ಸ್ಟ್ರಾಟಜಿಯ ಸೀಕ್ರೆಟ್ ಏನು? ಮೋದಿ ಆಡ್ತಾ ಇರೋ ಚದುರಂಗ ಎಂಥದ್ದು? ಅದರ ಪರಿಣಾಮ ಏನು? ಮೋದಿ ಉರುಳಿಸೋ ದಾಳಕ್ಕೆ, ಎದುರಾಳಿಗಳ ಪ್ರತಿತಂತ್ರ ಎಂಥದ್ದು? ಅದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ. ಶತ್ರುಗಳಿಂದ ಪಾರಾಗೋಕೆ, ಈ ಒಂದು ಸುರಂಗ ಸಾಕು ಅಂದ್ಕೊಂಡ್ರಾ ? ಅಥವಾ, ಇಂಥಾ 30 ಸುರಂಗಗಳು ರೆಡಿಯಾಗ್ಬಿಟ್ರೆ, ಅಲ್ಲಿಗೆ ಸಮಸ್ಯೆ ಬಗೆಹರಿದ ಹಾಗೆ ಅಂದ್ಕೊಂಡ್ರಾ? ಇಲ್ಲ.. ಶ

ತ್ರುನಿಗ್ರಹಕ್ಕೆ ಇಷ್ಟೇ ಸ್ಟ್ರಾಟಜಿ ಸಾಕಾಗಲ್ಲ.. ಅದಕ್ಕಂತಲೇ ಮೋದಿ ಪಡೆ ಬೇರೊಂದು ರಣವ್ಯೂಹವನ್ನೇ ರಚಿಸಿಕೊಂಡಿದೆ. ಭಾರತ ಅಗ್ನಿಪಂಜರದಲ್ಲಿದೆ ಅನ್ನೋ ಸಂಗತಿ ಹೊಸದೇನೂ ಅಲ್ಲ, ಆದ್ರೆ ಅದನ್ನ ನಿಭಾಯಿಸೋದಕ್ಕೆ ಭಾರತ ಇಡ್ತಾ ಇರೋ ಹೆಜ್ಜೆ ಇದ್ಯಲ್ಲಾ ಅದು ನಿಜಕ್ಕೂ ರಾಜತಾಂತ್ರಿಕ ವಿಜಯಕ್ಕೆ ಕಾರಣವಾಗೋ ಎಲ್ಲಾ ಲಕ್ಷಣವೂ ಇದೆ. ಹೌದು.. ಸೇನೆಗೆ ಹೆಚ್ಚಿನ ಅನುಕೂಲವಾಗ್ಬೇಕು ಅನ್ನೋ ಉದ್ದೇಶದಿಂದಲೇ ಸರ್ಕಾರ ಸಾವಿರಾರು ಕೋಟಿ ಮೌಲ್ಯದ ಯೋಜನೆಗಳನ್ನ ಕಾರ್ಯರೂಪಕ್ಕೆ ತರ್ತಾ ಇದೆ.. ಇದರ ಪರಿಣಾಮ ಏನಾಗಿದೆ? ಭಾರತ ಬಲಿಷ್ಠವಾಗ್ಬೇಕು ಅಂದ್ರೆ, ಅದರ ಬಾಹುಗಳಂತಿರೋ ಗಡಿಗಳಲ್ಲಿ ಶಕ್ತಿ ಹೆಚ್ಚಬೇಕು.. ಶಕ್ತಿ ಹೆಚ್ಚಬೇಕು ಅಂದ್ರೆ, ಅಲ್ಲಿರೋ ಸೇನಾಪಡೆಗಳಿಗೆ ನರನಾಡಿಯಂಥಾ ರಸ್ತೆಗಳು ಬೇಕು.. ಅದಕ್ಕಂತಲೇ ಸರ್ಕಾರ ಹೊಸ ಯುಗವನ್ನೇ ಆರಂಭಿಸಿದೆ.