Aug 2, 2023, 2:28 PM IST
ಮಹಾರಾಷ್ಟ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರಿಗೆ (Prime Minister Modi) ಲೋಕಮಾನ್ಯ ತಿಲಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ(Lokmanya Tilak National award) ಮಾಡಿತು. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಪ್ರಶಸ್ತಿ ಸಂದಿರುವುದು ಖುಷಿ ವಿಚಾರವೇ. ಆದ್ರೆ, ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲ ನಾಯಕರ ವಿರುದ್ಧ ವಿರೋಧ ಕೇಳಿ ಬರ್ತಿದೆ. ಲೋಕಮಾನ್ಯ ಬಾಲ ಗಂಗಾಧರ ತಿಲಕ ಅವರ 103ನೇ ಪುಣ್ಯತಿಥಿ. ತಿಲಕರ ಈ ಪುಣ್ಯತಿಥಿ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಲೋಕಮಾನ್ಯ ತಿಲಕ್ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಹಾರಾಷ್ಟ್ರದ ಪುಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಮಹಾರಾಷ್ಟ್ರದ ಪುಣೆ ಮೂಲದ, ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ ವತಿಯಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಹೀಗಾಗಿ, ಮಹಾರಾಷ್ಟ್ರದಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ಅಲ್ಲಿನ ಪ್ರಮುಖ ರಾಜಕೀಯ ನಾಯಕರು ಹಾಜರಿದ್ದರು. ಈ ಪ್ರಮುಖ ನಾಯಕರದಲ್ಲಿ NCP, ಅಂದ್ರೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷರಾದ ಶರದ್ ಪವಾರ್(Sharad Pawar) ಅವ್ರು ಸಹ ಹಾಜರಿದ್ದರು. ಶರದ್ ಪವಾರ್ ಅವರ ಹಾಜರಾತಿಗೆ ಮಹಾಘಟಬಂಧನ್ ವಿರೋಧಿಸುತ್ತಿದೆ.
ಇದನ್ನೂ ವೀಕ್ಷಿಸಿ: ಗೃಹಲಕ್ಷ್ಮಿ ಯೋಜನೆ ಮಧ್ಯಮ ವರ್ಗದವರಿಗೆ ಸಿಗುವಂತೆ ಮಾಡಲು ಚಿಂತನೆ : ಲಕ್ಷ್ಮಿ ಹೆಬ್ಬಾಳ್ಕರ್