ಮಾನಸ ಗಂಗೋತ್ರಿಗೆ ಶತಕದ ಪುಳಕ: 100 ಘಟಿಕೋತ್ಸವಕ್ಕೆ ಮೋದಿ ಸಾಕ್ಷಿ!

Oct 19, 2020, 12:31 PM IST

ಮೈಸೂರು(ಅ.19): ಮಾನಸ ಗಂಗೋತ್ರಿಗೆ ಶತಕದ ಪುಳಕ, ಮೈಸೂರು ವಿಶ್ವವಿದ್ಯಾನಿಲಯ 100ನೇ ಘಟಿಕೋತ್ಸವದ ಸಂಭ್ರಮವನ್ನಾಚರಿಸಿದೆ. ಈ ಶತಮಾನೋತ್ಸವದ ಘಟಿಕೋತ್ಸವಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದಾರೆ. ಅಲ್ಲದೇ 100ನೇ ಘಟಿಕೋತ್ಸವದಲ್ಲಿ ಸುಧಾಮೂರ್ತಿಗೆ ಡಾಕ್ಟರೇಟ್ ಕೂಡಾ ಪ್ರಧಾನ ಮಾಡಲಾಗಿದೆ.

ದುಡ್ಡು ಡಬಲ್ ಮಾಡೋಕೆ ಮೋದಿ ಹೇಳ್ತಾರೆ ಈ 4 ಸೂತ್ರಗಳು..!

ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ದಿಕ್ಸೂಚಿಯಾಗಲಿದೆ. ಶೈಕ್ಷಣಿಕ ಪ್ರಗತಿ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದಿದ್ದಾರೆ. ಅಲ್ಲದೇ ಮೈಸೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಮಾಡಲಿದೆ. ದೇಶದ ಎಲ್ಲಾ ವಿವಿಗಳೂ‌ ಇದಕ್ಕೆ ಸಹಕಾರ ನೀಡಬೇಕು. ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿನಿಯರಿಗಿಂತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರಿಗೆ ಉನ್ನತ ಶಿಕ್ಷಣ ಕೊಡುವ ನಿಟ್ಟಿನಲ್ಲಿ ದೇಶ ಮತ್ತಷ್ಟು ಮುತುವರ್ಜಿಯ ವಹಿಸಬೇಕಿದೆ ಎಂದಿದ್ದಾರೆ. 

ಅಂದು ಚಾಯ್‌ವಾಲಾ, ಇಂದು ದೇಶದ ಪ್ರಧಾನಿ: 20 ವರ್ಷಗಳಲ್ಲಿ ಮೋದಿ ಎತ್ತರಕ್ಕೆ ಬೆಳೆದಿದ್ಹೇಗೆ?

ಇದೇ ವೇಳೆ ಉತ್ತರ ಕರ್ನಾಟಕ ಸಂತ್ರಸ್ತರಿಗೆ ಅಭಯ ಹೇಳಿದ್ದಾರೆ. ಕೇಂದ್ರ- ರಾಜ್ಯ ಜತೆಯಾಗಿ ಸಂತ್ರಸ್ತರ ಬೆನ್ನಿಗೆ ನಿಲ್ಲಲಿದೆ ಎಂದೂ ಭರವಸೆಯ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಪಿಎಂ ಮೋದಿ ದಸರಾ ಹಬ್ಬದ ಉತ್ಸಾಹವನ್ನು ಮಳೆ ಹಾಳು ಮಾಡಿದೆ. ಮಳೆ, ಪ್ರವಾಹದಿಂದ ಸಂಕಷ್ಟಕ್ಕೀಡಾದವರಿಗೆ ನೆರವು ನೀಡಲು ಸಿದ್ಧ ಎಂದಿದ್ದಾರೆ.