
ಕಾಶ್ಮೀರದಲ್ಲಿ ನಡೆದ ಉಗ್ರಗಾಮಿಗಳ ದಾಳಿಯ ಬಳಿಕ ಭಾರತ ಪಾಕ್ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿದೆ. ಇಂಥಾ ಟೈಂನಲ್ಲಿ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಮಾತ್ರ ಪಾಕಿಸ್ತಾನಿಗಳ ಜೊತೆ ದೋಸ್ತಿ ಮಾಡಿಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಾಶ್ಮೀರದಲ್ಲಿ ನಡೆದ ಉಗ್ರಗಾಮಿಗಳ ದಾಳಿಯ ಬಳಿಕ ಭಾರತ ಪಾಕ್ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿದೆ. ಚಿತ್ರಕಲಾವಿದರು ಕೂಡ ಈ ಕಷ್ಟಕಾಲದಲ್ಲಿ ದೇಶದ ಬೆಂಬಲಕ್ಕೆ ನಿಂತಿದ್ದಾರೆ. ಆದ್ರೆ ಇಂಥಾ ಟೈಂನಲ್ಲಿ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಮಾತ್ರ ಪಾಕಿಸ್ತಾನಿಗಳ ಜೊತೆ ದೋಸ್ತಿ ಮಾಡಿಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೇಬೋ ಮಾಡಿದ ಕೆಲಸ ನೋಡಿದ ಜನ ಕರೀನಾ ಇದು ಸರೀನಾ ಅಂತಿದ್ದಾರೆ.
ಯೆಸ್ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರದಾಳಿ ಇಡೀ ದೇಶವನ್ನ ಆಕ್ರೋಶದಲ್ಲಿ ಮುಳುಗುವಂತೆ. ಮಾಡಿದೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರೋದು ಜಗಜ್ಜಾಹೀರಾಗಿದೆ. ಸೋ ಭಾರತ-ಪಾಕ್ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣಗೊಂಡಿದೆ. ಇಂಥಾ ಹೊತ್ತಲ್ಲಿ ಸಿನಿಮಾ ಕಲಾವಿದರು ಕೂಡ ದೇಶದ ಬೆಂಬಲಕ್ಕೆ ನಿಂತಿದ್ದಾರೆ. ಆದ್ರೆ ಇಲ್ಲೊಬ್ಬ ಕಲಾವಿದೆ ಮಾತ್ರ ಪಾಕಿಸ್ತಾನಿಗಳ ಜೊತೆಗೆ ಜಾಲಿ ಮಾಡಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅದು ಬೇರ್ಯಾರೂ ಅಲ್ಲ ಬೇಬೋ ಕರೀನಾ ಕಪೂರ್.
ಹೌದು ಕರೀನಾ ಕಪೂರ್ ಇತ್ತೀಚಿಗೆ ದುಬೈನಲ್ಲಿ ಪಾಕಿಸ್ತಾನ ಮೂಲದ ಕಾಸ್ಟೂಮ್ ಡಿಸೈನರ್ ಫರಾಜ್ ಮನಾನ್ನ ಭೇಟಿ ಮಾಡಿದ್ದಾರೆ. ಫರಾಜ್ ಮನಾನ್ ಕರೀನಾ ಜೊತೆಗೆ ಕ್ಲಿಕ್ಕಿಸಿಕೊಂಡಿರೋ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಆ ಫೋಟೋಗಳೇ ಈಗ ವಿವಾದದ ಕಿಡಿ ಹೊತ್ತಿಸಿವೆ. ಅಸಲಿಗೆ ಕರೀನಾ ಕಪೂರ್ ಪಾಕಿ ಡಿಸೈನರ್ ಫರಾಜ್ ಮನಾನ್ ಜೊತೆಗೆ ಈ ಹಿಂದೆಯೂ ಕೆಲಸ ಮಾಡಿದ್ದಾರೆ. ತಮ್ಮ ಅನೇಕ ಫೋಟೋ ಶೂಟ್ಗಳಿಗೆ ಈ ಪಾಕಿಸ್ತಾನಿ ಡಿಸೈನರ್ ಜೊತೆ ಕೈ ಜೋಡಿಸಿದ್ದಾರೆ. ಆದ್ರೆ ಇಷ್ಟು ದಿನ ಅದು ವಿವಾದ ಆಗಿರಲಿಲ್ಲ. ಆದ್ರೆ ಈಗ ಯುದ್ಧಕಾಲದಲ್ಲಿ ಪಾಕಿಸ್ತಾನಿಯ ಸ್ನೇಹ ಬೇಕಿತ್ತಾ ಅಂತ ಜನ ಕರೀನಾಗೆ ಕ್ಲಾಸ್ ತೆಗೆದುಕೊಳ್ತಾ ಇದ್ದಾರೆ.
ಹೌದು ಕರೀನಾ ಕಪೂರ್ ಖಾನ್ಗೆ ದೇಶದ ಬಗ್ಗೆ, ದೇಶವಾಸಿಗಳ ಬಗ್ಗೆ ಒಂಚೂರು ಕಾಳಜಿ ಇಲ್ಲ. ಈಕೆಯನ್ನ ಬ್ಯಾನ್ ಮಾಡಿ ಅಂತ ಫ್ಯಾನ್ಸ್ ಒತ್ತಾಯಿಸ್ತಾ ಇದ್ದಾರೆ. ಅಸಲಿಗೆ ಕಪೂರ್ ಖಾಂದಾನಿನ ಕುವರಿ ಕರೀನಾ ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿವೆ. ಕರೀನಾಗೆ ಭಾರತೀಯ ಸಿನಿರಸಿಕರಿಂದ ಭರಪೂರ ಪ್ರೀತಿ, ಅಭಿಮಾನ ಸಿಕ್ಕಿದೆ. ಕರೀನಾ ನಾಯಕಿಯಾಗಿ ಒಂದಿಡಿ ದಶಕ ಟಾಪ್ ಸ್ಟಾರ್ ಆಗಿದ್ದವರು. ಸೈಫ್ ಅಲಿ ಖಾನ್ ಖಾನ್ ಜೊತೆ ಮದುವೆಯಾದ ಮೇಲೂ , ಎರಡು ಮಕ್ಕಳ ತಾಯಿಯಾದ ಮೇಲೂ ಕರೀನಾ ನಟಿಯಾಗಿ ಮಿಂಚ್ತಾ ಗೆಲುವು ಕಂಡಿದ್ದಾರೆ.
ಆದ್ರೆ ಕರೀನಾ ತಮ್ಮ ವೈಯಕ್ತಿಕ ವಿಚಾರಗಳಿಂದ ಹಲವು ಬಾರಿ ವಿವಾದಕ್ಕೆ ಸಿಲುಕಿದ್ದಾರೆ. ತನಗಿಂತ ವಯಸ್ಸಲ್ಲಿ ತುಂಬಾ ಹಿರಿಯನಾದ, ಜೊತೆಗೆ ಮೊದಲ ಮದುವೆಯಿಂದ ವಿಚ್ಛೇದನ ಪಡೆದ ಸೈಫ್ ಅಲಿ ಖಾನ್ನ ಕರೀನಾ ಮದುವೆಯಾಗಿದ್ದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇನ್ನೂ ಸೈಫ್ ಮತ್ತು ಕರೀನಾ ತಮ್ಮ ಪುತ್ರನಿಗೆ ತೈಮೂರ್ ಅಂತ ಹೆಸರಿಟ್ಟಾಗಲೂ ಸಿಕ್ಕಾಪಟ್ಟೆ ಟೀಕೆ ಕೇಳಿ ಬಂದಿದ್ವು. ತೈಮೂರ್ ಹಿಂದೂಸ್ತಾನದ ಮೇಲೆ ಆಕ್ರಮಣ ಮಾಡಿ ಲೂಟಿಗೈದ ಮುಸ್ಲಿಂ ದೊರೆ, ಅಂಥಾ ಹೆಸರನ್ನ ಮಗನಿಗಿಟ್ಟಿದ್ದಕ್ಕೆ ಸೈಫ್ ಮತ್ತು ಕರೀನಾ ಇಬ್ಬರೂ ಟೀಕೆ ಎದುರಿಸಿದ್ರು.
ಇದೀಗ ಭಾರತ ಪಾಕ್ ನಡುವೆ ಯುದ್ಧದ ವಾತಾವರಣ ಇರುವ ಹೊತ್ತಲ್ಲಿ ಪಾಕಿ ಡಿಸೈನರ್ ಜೊತೆ ಕೈ ಜೋಡಿಸಿ ಫೋಟೋಗೆ ಪೋಸ್ ಕೊಡ್ತಾ ಇರೋ ಕರೀನಾ ಕಪೂರ್ ಬಗ್ಗೆ ಮತ್ತೆ ಟೀಕೆಗಳ ಸುರಿಮಳೆಯಾಗ್ತಾ ಇದೆ. ಇಡೀ ದೇಶ ಹೊತ್ತಿ ಉರೀತಾ ಇದ್ರೂ ನಮ್ಮ ತಾರೆಯರಿಗೆ ಮಾತ್ರ ಅದರ ಕಾಳಜಿಯೇ ಇರೋದಿಲ್ಲ. ಅವರಿಗೆ ದೇಶ-ಧರ್ಮ ಅನ್ನೋ ಅಭಿಮಾನವೇ ಇಲ್ಲ ಅಂತ ಜನರೆಲ್ಲಾ ಕೆಂಡಾಮಂಡಲ ಆಗಿದ್ದಾರೆ. ಕರೀನಾ ಇದು ಸರೀನಾ ಅಂತ ಜನ ಕೇಳ್ತಾ ಇರೋ ಪ್ರಶ್ನೆಗೆ ಬೇಬೋ ಏನ್ ಉತ್ತರ ಕೊಡ್ತಾರೋ ಕಾದು ನೋಡಬೇಕಿದೆ.