ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?

ಡಿಸೆಂಬರ್ 13 ಟಾರ್ಗೆಟ್ ಆಗಿದ್ದೇಕೆ..? ಹೇಗಿರುತ್ತೆ ಸಂಸತ್ ಭದ್ರತೆ..? ಎಡವಟ್ಟಾಗಿದ್ದು ಎಲ್ಲಿ..?

Published : Dec 14, 2023, 02:27 PM ISTUpdated : Dec 14, 2023, 02:28 PM IST

ಪಾಸ್ ಪಡೆದು ಸಂಸತ್ಗೆ ಬಂದಿದ್ದರು ಆ ಇಬ್ಬರು!
ಪ್ರತಾಪ್ ಸಿಂಹ ಹೆಸರಲ್ಲಿ ನೀಡಲಾಗಿತ್ತು ಪಾಸ್!
ದೇಶವನ್ನೇ ಬೆಚ್ಚಿಬೀಳಿಸಿದೆ ಸಂಸತ್ ಭವನ ದಾಳಿ!

ಸಂಸತ್ತಿನ ಒಳಗೆ.. ಹೊರಗೆ..ಎರಡೂ ಕಡೆ  ನಡೆದಿತ್ತು ಭಾರೀ ಭದ್ರತಾ ಲೋಪ. ಖಲಿಸ್ತಾನಿ ಉಗ್ರ ಪನ್ನುನ್(Gurpatwant Pannun ) ಹೇಳಿದ ದಿನವೇ ಸಂಸತ್‌ನಲ್ಲಿ ಕೋಲಾಹಲ ನಡೆದಿತ್ತು. ಇದು ದೇಶವನ್ನೇ ಬೆಚ್ಚಿಬೀಳಿಸಿದ ಸಂಗತಿ. ಪ್ರತಿಯೊಬ್ಬರಲ್ಲೂ ಭಯ ಹುಟ್ಟಿಸುವಂಥಾ ಸಂಗತಿ. ಯಾಕಂದ್ರೆ, ಈ ಘಟನೆ ನಡೆದಿದ್ದು ಮತ್ತೆಲ್ಲೋ ಅಲ್ಲ, ದೇಶದ ಶಾಸನಗಳು ರೂಪುಗೊಳ್ಳೋ ಸಂಸತ್‌ನಲ್ಲಿ. ಕಲಾಪದಲ್ಲಿ ಜೀರೋ ಅವರ್ ನಡೆಯುತ್ತಿತ್ತು. ಅತಿಥಿ ಗ್ಯಾಲೆರಿಯಿಂದ ಇಬ್ಬರು ಧುಮುಕಿ ನೇರವಾಗಿ ಸ್ಪೀಕರ್ (Speaker) ಕುರ್ಚಿಯ ಕಡೆ ಧಾವಿಸಿದರು. ಅವರ ಕೈಯಲ್ಲಿ ಕ್ಯಾನಿಸ್ಟರ್(ಸಣ್ಣ ಸಿಲೆಂಡರ್ ಡಬ್ಬಿ ಇತ್ತು. ಅದರಿಂದ ಹಳದಿ ಸ್ಮೋಕ್ ಹೊಮ್ಮುವಂತೆ ಮಾಡಿದರು. ಇಬ್ಬರಲ್ಲೊಬ್ಬ ಸ್ಪೀಕರ್ ಕುರ್ಚಿಯ ಕಡೆ ಓಡಿದ. ಸಂಸದರ ಕೈಗೆ ಸಿಗದಂತೆ ಓಡಿದ. ಅವನು ಹಿಡಿದಿದ್ದ ಕ್ಯನಿಸ್ಟರ್ನಿಂದ ಹಳದಿ ಹೊಗೆ ಬರುತ್ತಿತ್ತು. ಅದರಲ್ಲಿ ಯಾವ ರಾಸಯನಿಕವಿತ್ತೋ ಗೊತ್ತಿಲ್ಲ. ಆದರೆ ವಿಸಿಟರ್ಸ್ ಗ್ಯಾಲರಿಯಿಂದ ಎಗರಿ ಬಂದ ಆ ಇಬ್ಬರು, ಕೈಲಿ ಕ್ಯಾನಿಸ್ಟರ್ ಇಟ್ಕೊಂಡು ಸಂಸತ್ ಒಳಗೆ ಬಂದಿದ್ದು ಭಾರೀ ಭದ್ರತಾ ಲೋಪ. ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ರೆಕಾರ್ಡ್ ಆಗ್ತಾ ಇತ್ತು.. ಅದರ ಅರಿವೂ ತಮ್ಮಗಿಲ್ಲದ ಹಾಗೆ, ಅಂದುಕೊಂಡಿದ್ದನ್ನ ಆ ಇಬ್ಬರು ಮಾಡಿಮುಗಿಸಿದ್ರು.. ಅಂತಿಮವಾಗಿ ಆ ಇಬ್ಬರನ್ನೂ ಸಹ ಪೊಲೀಸರು ವಶಕ್ಕೆ ಪಡೆದ್ರು.ಸದ್ಯದ ಮಾಹಿತಿ ಪ್ರಕಾರ ಆ ಇಬ್ಬರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಹೊರಗಿದ್ದ ಇಬ್ಬರನ್ನೂ ಬಂಧಿಸಲಾಗಿದೆ. ಸಂಸತ್(Parliment) ಒಳಗೆ ಇಷ್ಟೆಲ್ಲಾ ಕೋಲಾಹಲ ನಡೆಸಿದ್ರಲ್ಲಾ ಆ ಇಬ್ಬರು, ಆ ಇಬ್ಬರಿಗೆ ಪಾಸ್ ಇಶ್ಯು ಆಗಿರೋದು ಸಂಸದ, ಪ್ರತಾಪ್ ಸಿಂಹ(Pratap Simha) ಅವರ ಹೆಸರಲ್ಲಿ.. ಅವರ ಹೆಸರು ಬಳಸ್ಕೊಂಡು ಒಳಗೆ ಬಂದೋರು, ಮಾಡಬಾರದ ಕೃತ್ಯ ಎಸಗಿದ್ದರು.. ಅವರು ಮಾಡಿದ ಘಟನೆಗೆ, ದೇಶವೇ ಭೀತಿಗೊಳಗಾಗೋ ಹಾಗಾಯ್ತು.

ಇದನ್ನೂ ವೀಕ್ಷಿಸಿ:  ಸಂಸತ್‌ ದಾಳಿ ಮಾಡಿದವರ ಉದ್ದೇಶ ಏನಾಗಿತ್ತು? ಖಲಿಸ್ತಾನಿ ಉಗ್ರನ ಬೆದರಿಕೆ ನಂತರವೂ ಭದ್ರತಾ ವೈಫಲ್ಯ !

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
Read more