ಭಾರತವನ್ನ ದ್ವೇಷಿಸೋದೇ ಜೀವನ ಧ್ಯೇಯ ಅಂತ ಭಾವಿಸಿಕೊಂಡಿದ್ದವರು, ಇವತ್ತು ಭಾರತವನ್ನ ಕೊಂಡಾಡ್ತಾ ಇದಾರೆ.ಪಾಕಿಸ್ತಾನದ ಮಾಜಿ ಪ್ರಧಾನಿ, ಪ್ರಧಾನಿ ಅಭ್ಯರ್ಥಿಗಳು ಇದೀಗ ಭಾರತವನ್ನು ಹೊಗಳುತ್ತಿದ್ದಾರೆ. ತಮ್ಮ ದೇಶವನ್ನು ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ದಿಢೀರ್ ಪ್ರೀತಿ ಹುಟ್ಟಲು ಕಾರಣವೇನು?
ಕಳೆದ ಕೆಲ ತಿಂಗಳುಗಳಿಂದ ಪಾಕಿಸ್ತಾನದ ಸಾಮಾನ್ಯ ಜನರು ಮಾತ್ರವಲ್ಲ ಪ್ರಧಾನಿ ಅಭ್ಯರ್ಥಿಗಳು, ಮಾಜಿ ಪ್ರಧಾನಿಗಳಿಗೆ ಭಾರತದ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿದೆ. ಭಾರತ ಹಾಗೂ ಪಾಕಿಸ್ತಾನ ಸ್ವತಂತ್ರಗೊಂಡು 75 ವರ್ಷಗಳಾಗಿದೆ. ಇಷ್ಟು ದಿನ ಸದಾ ಕಾಲು ಕೆರೆದು ಯುದ್ದಕ್ಕೆ ಬರುವ ಪಾಕಿಸ್ತಾನ ಇದೀಗ ಭಾರತವೇ ಅಚ್ಚು ಮೆಚ್ಚು ಎನ್ನುತ್ತಿದೆ. ಅಷ್ಟಕ್ಕೂ ಭಾರತ ಸಾಧಿಸಿದ್ದೇನು? ಅದನ್ನ ಜಗತ್ತು ಹೇಗೆ ನೋಡ್ತಾ ಇದೆ? ಪಾಕಿಸ್ತಾನ ನಾಯಕರ ಹೇಳಿಕೆ ಹಿಂದಿರುವ ಲೆಕ್ಕಾಚಾರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.