Feb 11, 2023, 2:21 PM IST
ಪಾಕಿಸ್ತಾನದ ಆರ್ಥಿಕತೆ ತೀವ್ರ ಹದಗೆಟ್ಟಿದ್ದು, ವಿದೇಶದಿಂದ ಸಾಲ ಸಿಗದೆ ತತ್ತರಿಸುತ್ತಿದೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಮಧ್ಯೆ, ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಸಾಲ ನೀಡುವ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಒಪ್ಪಂದ ಮುರಿದುಬಿದ್ದಿರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಈ ಹಿನ್ನೆಲೆ ಪಾಕಿಸ್ತಾನವನ್ನು ಭಾರತ ರಕ್ಷಿಸಬೇಕಾ, ಪಾಕಿಸ್ತಾನದ ಮೊಸಳೆ ಕಣ್ಣೀರಿಗೆ ಭಾರತ ಕರಗಬೇಕಾ ಎಂಬ ಮಾತುಗಳೂ ಕೇಳಿಬರುತ್ತಿದೆ. ಅಲ್ಲದೆ, ಪಾಕಿಸ್ತಾನದ ಪಾಲಿಗೆ ಮೋದಿ ಆಪದ್ಬಾಂಧವ ಆಗ್ತಾರಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.