ಬಿಜೆಪಿ, ಕಾಂಗ್ರೆಸ್‌ ನಡುವೆ 'ಅಲ್ಪಸಂಖ್ಯಾತ ಉನ್ನತ ಹುದ್ದೆ' ವಾರ್‌

ಬಿಜೆಪಿ, ಕಾಂಗ್ರೆಸ್‌ ನಡುವೆ 'ಅಲ್ಪಸಂಖ್ಯಾತ ಉನ್ನತ ಹುದ್ದೆ' ವಾರ್‌

Published : Oct 26, 2022, 11:13 PM IST

ಬ್ರಿಟನ್‌ನಲ್ಲಿ ಅಲ್ಪಸಂಖ್ಯಾತ ಹಿಂದೂಗೆ ಪ್ರಧಾನಿ ಪಟ್ಟ ನೀಡಿರುವುದು, ದೇಶದಲ್ಲಿ ರಾಜಕೀಯ ಯುದ್ಧಕ್ಕೆ ಕಾರಣವಾಗಿದೆ. ಇದೇ ಅಸ್ತ್ರ ಹಿಡಿದು ಬಿಜೆಪಿ ವಿರುದ್ಧ ಕಾಂಗ್ರೆಸ್ ಚಾಟಿ ಬೀಸಿದೆ. ಕಾಂಗ್ರೆಸ್ ಟೀಕೆಗೆ ಬಿಜೆಪಿ ನಾಯಕರೂ ಕೆಂಡಾಮಂಡಲರಾಗಿದ್ದಾರೆ. ಭಾರತದಲ್ಲಿ ಅಲ್ಪಸಂಖ್ಯಾತ ಅತ್ಯುನ್ನತ ಹುದ್ದೆ ಸಿಕ್ಕಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು (ಅ. 26): ಬ್ರಿಟನ್ ದೇಶದಲ್ಲಿ ರಿಷಿ ಸುನಕ್‌ ಪ್ರಧಾನಿಯಾಗಿ ತಮ್ಮ ಅಧಿಕಾರ ಆರಂಭಿಸಿದ್ದಾರೆ. ಅಲ್ಪ ಸಂಖ್ಯಾತ ಹಿಂದುವಿಗೆ ಬ್ರಿಟನ್‌ನಲ್ಲಿ ಉನ್ನತ ಪದವಿ ನೀಡಿರುವುದು ಭಾರತದಲ್ಲಿ ವಿರೋಧ ಪಕ್ಷಗಳಿಗೆ ಮಿರ್ಚಿ ಇಟ್ಟಂತಾಗಿದೆ. ಇದೇ ಅಸ್ತ್ರ ಹಿಡಿದು ಕಾಂಗ್ರೆಸ್‌, ಬಿಜೆಪಿಯನ್ನು ಟೀಕೆ ಮಾಡಿದೆ.  ಕಾಂಗ್ರೆಸ್ ಟೀಕೆಗೆ ಬಿಜೆಪಿ ನಾಯಕರು ಭರ್ಜರಿಯಾಗಿ ತಿರುಗೇಟು ನೀಡಿದ್ದು, ಭಾರತದಲ್ಲಿ ಅಲ್ಪ ಸಂಖ್ಯಾತರಿಗೆ ಉನ್ನತ ಹುದ್ದೆ ಸಿಕ್ಕೇ ಇಲ್ವಾ ಎಂದು ಪ್ರಶ್ನೆ ಮಾಡಿ, ಅದರ ದೊಡ್ಡ ಲಿಸ್ಟ್‌ ಅನ್ನೇ ಬಿಡುಗಡೆ ಮಾಡಿದೆ.

ಭಾರತದ ದೇಶದ ವೈವಿಧ್ಯತೆ ಸಂಸ್ಕೃತಿಯನ್ನೂ ದುರ್ಬಲಗೊಳಿಸುವ, ಅಸಹಿಷ್ಣುತೆ ವಾತಾವರಣ ನಿರ್ಮಾಣಕ್ಕೆ ಬಲಪಂಥೀಯರ ಸಂಚು ನಡೆಯುತ್ತಿದೆ. ಬ್ರಿಟನ್ ರಾಜಕೀಯ ಬೆಳವಣಿಗೆ ಭಾರತ ರಾಜಕೀಯ ಪಾಠ ಕಲಿಬೇಕಿದೆ. ಅಲ್ಪಸಂಖ್ಯಾತ ಪ್ರಜೆಗಳಿಗೆ ಅತ್ಯುನ್ನತ ಅಧಿಕಾರ ನೀಡುವ ಅಮೆರಿಕ, ಬ್ರಿಟನ್ ಔದಾರ್ಯ ನಮ್ಮಲ್ಲೂ ಬರಲಿ. ನಮ್ಮಲ್ಲಿ ಧಾರ್ಮಿಕ ಬಹುಸಂಖ್ಯಾತರಿಂದ ಅಧಿಕಾರ ದಬ್ಬಾಳಿಕೆ ಮುಂದುವರಿದಿದೆ' ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಟ್ವೀಟ್‌ ಮಾಡಿದ್ದರು.

ಬೆಂಗ್ಳೂರಿಗೆ ಬಂದಾಗ ವಿದ್ಯಾರ್ಥಿ ಭವನದ ದೋಸೆ ಸವಿದಿದ್ದ ರಿಷಿ ಸುನಕ್‌..!

ಇನ್ನು ಶಶಿ ತರೂರ್‌ ಹಾಗೂ ಮೆಹಬೂಬಾ ಮುಫ್ತಿ ಕೂಡ ಇದೇ ಅರ್ಥದಲ್ಲಿ ಟ್ವೀಟ್‌ ಮಾಡಿದ್ದರು. ಇದಕ್ಕೆ ಬಿಜೆಪಿ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ನಾಯಕರು ಬಹುಸಮಖ್ಯಾತರ ಬಗ್ಗೆ ಹೈಪರ್ ಆ್ಯಕ್ಟೀವ್ ಆಗಿದ್ದಾರೆ. ಭಾರತದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ 10 ವರ್ಷ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ 5 ವರ್ಷಗಳ ಅಧಿಕಾರ ನೀಡಿದೆ ಎಂದು ರವಿಶಂಕರ್‌ ಪ್ರಸಾದ್‌ ಉತ್ತರ ನೀಡಿದ್ದಾರೆ.

22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
Read more