ಬೈಕ್ ಏರಿ ಸ್ಟಂಟ್ ಮಾಡಿದ ಅಜ್ಜ: ವಿಡಿಯೋ ವೈರಲ್, ಕೇಸ್ ಜಡಿದ ಖಾಕಿ

May 1, 2022, 4:55 PM IST

ಯುವ ತರುಣರು, ಬಿಸಿ ರಕ್ತದ ಯುವಕರು ಬೈಕ್ ಏರಿ ಸ್ಟಂಟ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಗಾಜಿಯಾಬಾದ್‌ನಲ್ಲಿ ವೃದ್ಧರೊಬ್ಬರು ಬೈಕ್ ಏರಿ ಭಯಾನಕ ಸ್ಟಂಟ್ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಾದ ಬಳಿಕ ಅಜ್ಜನ ವಿರುದ್ಧ ಪೊಲೀಸರು ಕೇಸ್‌ ಜಡಿದಿದ್ದಾರೆ. ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಈ ಸಾಹಸ ಮಾಡದಂತೆ ಇತರರಿಗೆ ಎಚ್ಚರಿಕೆ ನೀಡಿದ್ದಾರೆ.