Jun 3, 2023, 11:13 PM IST
ಒಡಿಶಾ ದುರಂತ ನಡೆದ ರೈಲು ನಿಲ್ದಾಣದ ಬಳಿ ಎರಡು ಲೂಪ್ ಲೈನ್ ಇತ್ತು. ಆದರೆ ಈ ಲೂಪ್ ಲೈನ್‌ನಲ್ಲಿ ಎರಡು ಗೂಡ್ಸ್ ರೈಲು ನಿಂತಿತ್ತು. ನಿಂತಿದ್ದ ಗೂಡ್ಸ್ ರೈಲಿಗೆ ಕೊರಮಂಡಲ್ ಡಿಕ್ಕಿ ಹೊಡೆದರೆ, ಕೊರಮಂಡಲ್ ಎಕ್ಸ್‌ಪ್ರೆಸ್ ರೈಲಿಗೆ ಯಶವಂತಪುರ ರೈಲು ಡಿಕ್ಕಿ ಹೊಡೆದಿದೆ. ಇವೆಲ್ಲ ಒಂದೇ ನಿಮಿಷದಲ್ಲಿ ನಡೆದುಹೋಗಿದೆ. ಈ ಅಪಘಾತವಾದ ರೈಲಿನಲ್ಲಿದ್ದ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಒಡಿಶಾದ ಜೈನ ತೀರ್ಥಯಾತ್ರೆಗೆ ಹೊರಟಿದ್ದ 110 ಕನ್ನಡಿಗರು ಸೇಫ್ ಆಗಿದ್ದಾರೆ. ಯಶವಂತಪುರ- ಹೌರ ರೈಲಿನಲ್ಲಿ ಪ್ರಯಾಣ ಮಾಡಿದ್ದ 110 ಕನ್ನಡಿಗರು ರಿಸರ್ವೇಶನ್ ವಿಚಾರದಲ್ಲಿ ಬೇರೆ ಬೋಗಿಯಲ್ಲಿ ಪ್ರಯಾಣ ಮುಂದುವರಿಸಿದ್ದರು. ಇದರಿಂದ ಕನ್ನಡಿಗರು ಸುರಕ್ಷಿತವಾಗಿದ್ದಾರೆ.