Aug 11, 2023, 2:55 PM IST
ಶತಾಯ ಗತಾಯ ಮೋದಿ(Modi) ಅವರನ್ನ ಮಣಿಸಬೇಕು. 2024ರ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕು. ಇದು ಐಎನ್‌ಡಿಐಎ (I.N.D.I.A) ಮೈತ್ರಿಕೂಟದ ಏಕಮಾತ್ರ ಹೆಗ್ಗುರಿಯಾಗಿದೆ. ಆ ಗುರಿ ಸಾಧನೆಗಾಗಿಯೇ ತಮ್ ತಮ್ಮ ನಡುವಿನ ವೈರುಧ್ಯವನ್ನೆಲ್ಲಾ ಬದಿಗಿಟ್ಟು, ಒಟ್ಟಾಗಿ ಮೋದಿ ವಿರುದ್ಧ ಹೋರಾಟಕ್ಕೆ ಮುಂದಾಗಿವೆ. ಆ ಹೋರಾಟದ ಒಂದು ರೂಪವೇ ಈ ಅವಿಶ್ವಾಸ ಮಂಡನೆಯ(no confidence motion) ನಿರ್ಣಯ. ಅವಿಶ್ವಾಸ ಮಂಡನೆ ಅನ್ನೋದು ಐಎನ್‌ಡಿಐಎ ಮೋದಿ ವಿರುದ್ಧ ಸಾರಿದ್ದ ಮಹಾಯುದ್ಧ. ಈ ಯುದ್ಧದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಅಂತ ಗೊತ್ತಿದ್ರೂ ಕೂಡ, ಐಎನ್‌ಡಿಐಎ ಇಂಥದ್ದೊಂದು ನಿರ್ಣಯಕ್ಕೆ ಮುಂದಾಗಿತ್ತು. ಮೋದಿ ಅವರನ್ನ ಹೇಗಾದ್ರು ಮಾಡಿ ಕಟ್ಟಿಹಾಕೋದೇ, ವಿಪಕ್ಷಗಳ ಮೇನ್ ಪ್ಲಾನ್ ಆಗಿತ್ತು. ಹಾಗಾಗಿನೇ, ಮಣಿಪುರ ವಿಚಾರವನ್ನ ಮುಂದಿಟ್ಕೊಂಡು, ಮೋದಿ ಅವರನ್ನ ಕಟ್ಟಿ ಹಾಕ್ಬೇಕು ಅನ್ನೋ ಕಾರಣಕ್ಕೇ, ವಿಪಕ್ಷಗಳು ಅವಿಶ್ವಾಸ ಘೋಷಿಸಿದ್ವು.
ಇದನ್ನೂ ವೀಕ್ಷಿಸಿ: ಕ್ಷಣ ಕ್ಷಣಕ್ಕೂ ಆತಂಕ, ಭಯ ಕಣ್ಣೀರ ಕೋಡಿ: ಗಂಡನ ಜೀವ ಉಳಿಸಿಕೊಳ್ಳಲು ನಿತ್ಯ ಅಲೆದಾಟ!