Nitish Kumar : ಬಿಜೆಪಿ ಜೊತೆ ನಿತೀಶ್ ಹೊಸ ಆಟ..I.N.D.I.A ಕೂಟಕ್ಕೆ ಪ್ರಾಣಸಂಕಟ..!

Jan 28, 2024, 3:01 PM IST

ರಾಜಕೀಯ ಕ್ಷಿಪ್ರಕ್ರಾಂತಿಯ ನೆಲ ಬಿಹಾರದ(Bihar) ರಾಜಕಾರಣದಲ್ಲಿ ಮತ್ತೆ ಬಿರುಗಾಳಿ ಬೀಸಿದೆ. ಇದು ಬಿರುಗಾಳಿಯಷ್ಟೇ ಅಲ್ಲ, ಸುನಾಮಿ. I.N.D.I.A ಮೈತ್ರಿಕೂಟದ ಸೂತ್ರಧಾರ, ಪ್ರಧಾನಿ ಮೋದಿ ವಿರುದ್ಧ ದಂಡು ಕಟ್ಟಿ ಯುದ್ಧಕ್ಕೆ ನಿಂತಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಇದ್ದಕ್ಕಿದ್ದಂತೆ ತಮ್ಮ ವರಸೆ ಬದಲಿಸಿದ್ದಾರೆ. ಬಿಹಾರದ ಜೆಡಿಯು ಲೀಡರ್ ನಿತೀಶ್ ಕುಮಾರ್ ಆ ಸಾಲಿಗೆ ಸೇರಿದವರು. ಮೀನಿನ ಹೆಜ್ಜೆ ಗುರುತನ್ನು ಬೇಕಾದ್ರೂ ಕಂಡು ಹಿಡಿಯಬಹುದು. ಆದ್ರೆ ನಿತೀಶ್ ಕುಮಾರ್ ಅವ್ರ ರಾಜಕೀಯ ನಡೆಗಳನ್ನು ಗುರುತಿಸೋದು ಕಷ್ಟ. ಕಳೆದ 10 ವರ್ಷಗಳಲ್ಲಿ ನಿತೀಶ್ ಕುಮಾರ್ ಆಡಿದ ರಾಜಕೀಯದಾಟಗಳನ್ನು ನೋಡಿದ್ರೆ, ಎಂಥವರಾದ್ರೂ ಒಂದು ಕ್ಷಣ ಬೆಚ್ಚಿ ಬೀಳ್ತಾರೆ, ಅಚ್ಚರಿ ಪಡ್ತಾರೆ. ಈಗ ನಿತೀಶ್ ಅಂಥದ್ದೇ ಆಟವನ್ನು ಆಡ್ತಾ ಇದ್ದಾರೆ. ಆರ್.ಜೆ.ಡಿ(RJD) ಮತ್ತು ಕಾಂಗ್ರೆಸ್(Congress) ಜೊತೆಗೂಡಿ ಮಹಾಘಟಬಂಧನ್ ಹೆಸರಿನ ಮೈತ್ರಿಕೂಟ ಕಟ್ಟಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್, ಈಗ ಮತ್ತೊಮ್ಮೆ ಚದುರಂಗದಲ್ಲಿ ಹೊಸ ದಾಳ ಉರುಳಿಸಿದ್ದಾರೆ. ಮಹಾಘಟಬಂಧನ್ ಮೈತ್ರಿಕೂಟವನ್ನು ತೊರೆದು ಬಿಜೆಪಿ(BJP) ಜೊತೆ ಸೇರಿ ಹೊಸ ಸರ್ಕಾರ ರಚಿಸೋದಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಇದೇ 29ರಂದು ಬಿಹಾರ ಪ್ರವೇಶಿಸ್ತಾ ಇದೆ. ಅದಕ್ಕೂ ಮೊದಲೇ ಇಂಡಿಯಾ ಮೈತ್ರಿಕೂಟದಲ್ಲಿ ಬಿರುಗಾಳಿ ಎದ್ದಿದೆ. ಇಂಡಿಯಾ ಮೈತ್ರಿಕೂಟದ ರೂವಾರಿ ನಿತೀಶ್ ಕುಮಾರ್, ಮಹಾಮೈತ್ರಿಯಿಂದ ಹೊರ ನಡೆದು ಮತ್ತೆ NDA ಮೈತ್ರಿಕೂಟ ಸೇರಿದ್ದಾರೆ.

ಇದನ್ನೂ ವೀಕ್ಷಿಸಿ:  ಇಂಡಿಯಾ ಮೈತ್ರಿಕೂಟ ಛಿದ್ರವಾಗಿದೆ, ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತೆ: ಬಿಎಸ್‌ವೈ