* ಉಕ್ರೇನ್ ಮೇಲೆ ರಷ್ಯಾ ಯುದ್ಧ
* ಯುದ್ಧ ಸಾರಿದ ರಷ್ಯಾ ನಡೆಗೆ ವ್ಯಾಪಕ ವಿರೋಧ
* ಭಾರತದ ಮೇಲೆಯೂ ಪರಿಣಾಮ ಆಗಲಿದೆ
* ತೈಲ ದರದಲ್ಲಿಯೂ ಏರಿಕೆ
ಬೆಂಗಳೂರು(ಫೆ. 25) ರಷ್ಯಾ (Russia) ಉಕ್ರೇನ್ (Ukraine) ತಿಕ್ಕಾಟ ಅಂತಿಮ ಹಂತಕ್ಕೆ ಬಂದಿದ್ದು ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದೆ. ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳು (USA) ರಷ್ಯಾ ನಡೆಯನ್ನು ಖಂಡಿಸಿವೆ.
ಪುಟಿನ್ ಇಂಥ ನಿರ್ಧಾರ ಮಾಡಲು ಕಾರಣವೇನು?
ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿದರೂ ನ್ಯಾಟೋ ಪಡೆಗಳು ಮಾತ್ರ ಉಕ್ರೇನ್ ನ ಸಹಾಯಕ್ಕೆ ಬರಲಿಲ್ಲ. ರಾಜತಾಂತ್ರಿಕ ಹಾಗೂ ಆರ್ಥಿಕ ದಿಗ್ಭಂದನದ ಮಾತುಕತೆಗಳು ನಡೆದಿವೆಯಾದರೂ ಸೇನೆಯನ್ನು ಕಳಿಸಿ ರಷ್ಯಾ ವಿರುದ್ಧ ಹೋರಾಟ ಮಾಡುವ ಪ್ರಯತ್ನ ಮಾಡಿಲ್ಲ.ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರದ ನೇರ ಪ್ರಭಾವ ಕಚ್ಚಾ ತೈಲದ ದರದಲ್ಲಿ ಅಗುವ ಸಾಧ್ಯತೆ ಅಧಿಕವಾಗಿದೆ. ಯುರೋಪ್ ಹಾಗೂ ಏಷ್ಯಾ ರಾಷ್ಟ್ರಗಳಿಗೆ ಕಚ್ಚಾತೈಲವನ್ನು ರಷ್ಯಾ ಈವರೆಗೂ ಹೇರಳವಾಗಿ ನೀಡುತ್ತಿತ್ತು. ಹಾಗಾಗಿ ಕಚ್ಚಾ ತೈಲದ ಬೆಲೆ 2014ರ ಬಳಿಕ ಮೊದಲ ಬಾರಿಗೆ ಬ್ಯಾರಲ್ ಗೆ 100 ಡಾಲರ್ ನ ಗಡಿ ದಾಟಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ