* ಎಂಇಎಸ್ ಬ್ಯಾನ್ ಮಾಡಿ, ಕರ್ನಾಟಕ ಬಂದ್ ಗೆ ಕರೆ
* ಡಿಸೆಂಬರ್ 31 ಕ್ಕೆ ಕರ್ನಾಟಕ ಬಂದ್!
* ಬಂದ್ ಗೆ ಸ್ಯಾಂಡಲ್ ವುಡ್ ಬೆಂಬಲ
* ಬಂದ್ ಬೇಕೋ? ಬೇಡವೋ.. ನಾಡಿನ ಜನ ಏನಂತಾರೆ?
ಬೆಂಗಳೂರು(ಡಿ. 22) ಎಂಇಎಸ್ (MES) ಪುಂಡಾಟ ಖಂಡಿಸಿ ಕರ್ನಾಟಕ ಬಂದ್ ಗೆ (Karnataka Bandh) ಸಂಘಟನೆಗಳು ಕರೆ ನೀಡಿದ್ದು ಚಿತ್ರೋದ್ಯಮ ಸಹ ಬೆಂಬಲ ನೀಡಿದೆ. ಬಂದ್ ಗೆ ಕರ್ನಾಟಕದ ಜನ ತಮ್ಮ ಬೆಂಬಲ ಸೂಚಿಸಿದ್ದು ಮಿಶ್ರ ಪ್ರತಿಕ್ರಿಯೆ ಬಂದಿದೆ. ಕೆಲವರು ಮರು ಪರಿಶೀಲನೆ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಇಷ್ಟೆಲ್ಲ ವಿರೋಧಗಳು ಎದುರಾಗುತ್ತಿದ್ದರೂ ಶಿವಸೇನೆ (Shiv Sena) ಮತ್ತು ಎಂಇಎಸ್ ಪುಂಡಾಟ ನಿಂತಿಲ್ಲ. ಬೆಳಗಾವಿ (Belagavi) ಗಡಿಯಲ್ಲಿ ಶಿವಸೇನೆ ಪ್ರತಿಭಟನೆ ನಡೆಸಿದೆ. ಮಹಾರಾಷ್ಟ್ರದಲ್ಲಿ ಮತ್ತೆ ಕರ್ನಾಟಕ ಧ್ವಜಕ್ಕೆ ಬೆಂಕಿ ಇಟ್ಟಿದ್ದಾರೆ. ಇನ್ನೊಂದು ಕಡೆ ಮತಾಂತರ ಬಿಲ್ ಮಂಡನೆಯಾಗಿದ್ದು ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ವಿರೋಧ ವ್ಯಕ್ತಪಡಿಸಿದೆ. ಇದು ಸಂವಿಧಾನ ಬಾಹಿರ ಕಾನೂನು ಎಂದು ಕಾಂಗ್ರೆಸ್ ಆರೋಪಿಸಿದೆ.