* ಅಕಾಲಿಕ ಮಳೆ ತಂದ ಕೇಡು, ತಗ್ಗದ ಪ್ರವಾಹ
* ಬೆಳೆದು ನಿಂತ ಬೆಳೆ ಕೈಗೆ ಬರುತ್ತಿಲ್ಲ
* ಹಿಂಸೆಯ ವಾಸನೆ, ಕೃಷಿ ಕಾಯ್ದೆ ಹಿಂಪಡೆದ ಸರ್ಕಾರ
* ಎಸಿಬಿ ಅಧಿಕಾರಿಗಳು ಬಯಲಿಗೆಳೆದ ಬ್ರಹ್ಮಾಂಡ ಭ್ರಷ್ಟಾಚಾರ
ಬೆಂಗಳೂರು(ನ. 21) ನವೆಂಬರ್ ತಿಂಗಳಿನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ (Rain) ಜನರನ್ನು ಪ್ರವಾಹದಲ್ಲಿ(Flood) ಮುಳುಗಿಸಿದೆ. ರಾಜಧಾನಿ (Bengaluru) ಬೆಂಗಳೂರಿನ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಇನ್ನು ರೈತರ ಪರಿಸ್ಥಿತಿ ಯಾರಿಗೂ ಬೇಡ. ಬೆಳೆದು ನಿಂತ ಬೆಳೆ ಕೈಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.
Rajasthan Politics:ಸಂಪುಟ ಪುನಾರಚನೆ ಕಸರತ್ತು, ರಾಜಸ್ಥಾನದ ಎಲ್ಲಾ ಸಚಿವರು ರಾಜೀನಾಮೆ!
ಕೆಲ ಪಕ್ಷಗಳಿಗೆ ರೈತರಿಗೆ ಒಳ್ಳೆಯದಾಗುವುದು ಬೇಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ರೈತರನ್ನು ಸದಾ ಸಮಸ್ಯೆಯಲ್ಲೇ ಇಡಬೇಕು ಎಂದು ಕೆಲ ರಾಜಕೀಯ ಪಕ್ಷಗಳು ಕೆಲಸ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಅಕ್ರಮಗಳ ಕೂಪವಾಗಿದ್ದ ಬಿಡಿಎಗೆ (BDA)ಎಸಿಬಿ (AcB)ಅಧಿಕಾರಿಗಳು ಶಾಕ್ ನೀಡಿದ್ದಾರೆ. ಎರಡು ದಿನದಿಂದ ದಾಳಿ ನಡೆಸಿ ಮೂನ್ನೂರು ಕೋಟಿಗೂ ಅಧಿಕ ಅಕ್ರಮ ಪತ್ತೆ ಮಾಡಿದೆ.