Dec 23, 2022, 10:17 PM IST
ನವದೆಹಲಿ (ಡಿ. 23): ಚೀನಾದಲ್ಲಿ ಕೊರೊನಾ ರಾಕ್ಷಸ ಸೃಷ್ಟಿಸಿರುವ ನರಕಕ್ಕೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ತನ್ನ ದೇಶದ ಜನರಿಗೆ ವ್ಯಾಕ್ಸಿನ್ ನೀಡುವಲ್ಲಿ ಕಮ್ಯೂನಿಸ್ಟ್ ಸರ್ಕಾರ ಮಾಡಿಕೊಂಡಿರುವ ಯಡವಟ್ಟಿನಿಂದ ಈಗ ಅಲ್ಲಿನ ಜನರು ಬೀದಿ ಹೆಣವಾಗ್ತಿದ್ದಾರೆ. ಭಾರತದಲ್ಲೂ ಇಂತಹದ್ದೇ ಪರಿಸ್ಥಿತಿ ಬಿಗಡಾಯಿಸಬಹುದಾ ಎಂಬ ಆತಂಕದ ನಡುವೆಯೇ ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ಭಾರತದಲ್ಲಿ ಇದಾಗಲೇ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನ ಕೊರೊನಾ ವಿರುದ್ಧದ ಹೋರಾಟಕ್ಕೆ ಬಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ಭಾರತ್ ಬಯೋಟಿಕ್ ಸಂಸ್ಥೆ ಮೂಗಿನ ರಂಧ್ರಗಳ ಮೂಲಕ ನೀಡಬಹುದಾದ ಇಂಟ್ರಾ ನೇಸಲ್ ವ್ಯಾಕ್ಸಿನ್ ತಯಾರಿಸಿದ್ದು, ಇದರ ಬಳಕೆಗೆ DCGIನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಇದನ್ನೂ ನೋಡಿ: ಇಟಲಿ ಕಾಂಗ್ರೆಸ್‌ನ ಒಂದು ನಾಯಿಯೂ ಭಾರತದ ಪರವಿಲ್ಲ, ಖರ್ಗೆಗೆ ಸಿಟಿ ರವಿ ಟಾಂಗ್!
ಕೇಂದ್ರ ಸರ್ಕಾರ ಬಳಕೆಗೆ ಅನುಮೋದಿಸಿರುವ ಇಂಟ್ರಾ ನೇಸಲ್ ಇಂದಿನಿಂದಲೇ ದೇಶಾದ್ಯಂತ ವ್ಯಾಕ್ಸಿನ್ ಡ್ರೈವ್ ಆರಂಭಿಸಲಾಗಿದೆ. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರೋ ಇನ್ಕೋವಾಕ್ ವ್ಯಾಕ್ಸಿನ್ ಅನ್ನು ಬೂಸ್ಟರ್ ಡೋಸ್ ಆಗಿ ಬಳಸಲಾಗ್ತಿದೆ. 18 ವರ್ಷ ಮೇಲ್ಪಟ್ಟವರಿಗೆ ಮೂಗಿನ ಮೂಲಕ ನೀಡಲಾಗುತ್ತದೆ. ಮೂಗಿನ ಎರಡೂ ಹೊಳ್ಳೆಗೆ 0.2 ml ಡ್ರಾಪ್ ಹಾಕಲಾಗುತ್ತದೆ.
ದೇಶಾದ್ಯಂತ ಬೂಸ್ಟರ್ ಡೋಸ್ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದ್ರೆ, ಬೆಂಗಳೂರಿನಲ್ಲಿ ವ್ಯಾಕ್ಸಿನ್ ಕೊರತೆ ಇದೆ ಎನ್ನಲಾಗುತ್ತಿದೆ. ಸ್ವತಃ ಬಿಬಿಎಂಪಿ ಆಯುಕ್ತರೇ ವ್ಯಾಕ್ಸಿನ್ ಕೊರತೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಕೋವ್ಯಾಕ್ಸಿನ್ ಬಳಕೆ ಅವಧಿ ಮುಗಿದಿದೆ, ನಮಗೆ ಕೋವಿಶೀಲ್ಡ್ ನೀಡಿ ಎಂದು ಮನವಿ ಮಾಡಿದ್ದಾರೆ. ಆದ್ರೆ, ವ್ಯಾಕ್ಸಿನ್ ಲಭ್ಯತೆ ಬಗ್ಗೆ ಜನರು ಗಾಬರಿ ಬೀಳೋದು ಬೇಡ ಎಂದಿರುವ ಆರೋಗ್ಯ ಸಚಿವ ಸುಧಾಕರ್, ನಮ್ಮಲ್ಲಿ ಹಾಲಿ 10 ಲಕ್ಷ ಡೋಸ್ ವ್ಯಾಕ್ಸಿನ್ ಇದೆ ಎಂದು ಧೈರ್ಯ ತುಂಬಿದ್ದಾರೆ.