News Hour : ಟಾಯ್ಲೆಟ್‌ ಪೈಪ್‌ನಲ್ಲಿ ನೋಟಿನ ಕಂತೆ... ಭ್ರಷ್ಟರಿಗಿಲ್ಲ ಜನರ ಚಿಂತೆ!

Nov 25, 2021, 12:14 AM IST

ಬೆಂಗಳೂರು(ನ. 25)  ಭ್ರಷ್ಟಾಚಾರ ನಿಗ್ರಹ ದಳ (ACB) ರಾಜ್ಯದ 68 ಕಡೆ ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡಿದೆ. ವಶಪಡಿಸಿಕೊಂಡ ಬಂಗಾರ (Gold) ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಹಿಂದಿನ ರೇಡ್ ಗೆ (ACB Raid)ಹೋಲಿಕೆ ಮಾಡಿದರೆ ಇದೊಂದು ವಿಚಿತ್ರ.  ಇಲ್ಲಿ ರೇಡ್ ಆದವರೆ ಮಾಧ್ಯಮಗಳ ಮುಂದೆ  ಮಾತನಾಡಿದ್ದಾರೆ.

ಶಿವಮೊಗ್ಗ ಕೃಷಿ ಇಲಾಖೆ ಅಧಿಕಾರಿ ಮನೆಯ ಚಿನ್ನದ ಖಜಾನೆ

ಇಷ್ಟೆಲ್ಲಾ ದಾಳಿಯಾಗುತ್ತದೆ. ಸಂಪತ್ತು ಸಿಗುತ್ತದೆ.. ನಂತರ ಶಿಕ್ಷೆ ಆಗುತ್ತದೆಯಾ ಇಲ್ಲವೆ? ಇದಕ್ಕೆ ಇಡುವ ತೊಡಕುಗಳು ಏನು?  ಭ್ರಷ್ಟರ ಬೇಟೆ, ಚಿನ್ನದ ಗಣಿ ವಶ ಎಲ್ಲವೂ ಹೇಳುತ್ತೇವೆ.. ಇದಾದ ಮೇಲೆ ದಾಳಿಗೆ ಒಳಗಾದವರನ್ನು ನೋಡಿದರೆ ಈ ವ್ಯವಸ್ಥೆಯ ಚಿತ್ರಣ ನಮ್ಮ ಮುಂದೆ ಬರುತ್ತದೆ. ಅಂದು ದಾಳಿಗೆ ಒಳಗಾಗಿದ್ದ ನಾಗೇಶ್ ನಂತರ ಶಾಸಕರಾಗಿ ಮಂತ್ರಿಯಾಗುತ್ತಾರೆ . ವಿಧಾನಪರಿಷತ್ ಚುನಾವಣೆಯಲ್ಲಿಯೂ (legislative council Election) ಮತ್ತೆ ಬೆಳಗಾವಿ (Belagavi) ಸದ್ದು ಮಾಡುತ್ತಿದೆ. ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಸಮರ ಜೋರಾಗಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ