ಸೋಮವಾರದಿಂದ ಸತತ ಮೂರು ದಿನಗಳ ವಿಚಾರಣೆಗೆ ಗುರಿಯಾಗಿದ್ದ ರಾಹುಲ್, ಗುರುವಾರ ವಿರಾಮ ಕೋರಿದ್ದರು
ನವದೆಹಲಿ (ಜೂ. 16): ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶುಕ್ರವಾರ ನಡೆಯಬೇಕಿದ್ದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಎಂದು ಜಾರಿ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ. ಸೋಮವಾರದಿಂದ ಸತತ ಮೂರು ದಿನಗಳ ವಿಚಾರಣೆಗೆ ಗುರಿಯಾಗಿದ್ದ ರಾಹುಲ್, ಗುರುವಾರ ವಿರಾಮ ಕೋರಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಬರುವಂತೆ ರಾಹುಲ್‌ಗೆ ಸೂಚಿಸಲಾಗಿತ್ತು.
ಆದರೆ ಕೋವಿಡ್ ಬಳಿಕದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ತಾಯಿ ಸೋನಿಯಾ ಆರೈಕೆಗೆ ತೆರಳಬೇಕಿರುವ ಕಾರಣ ಶುಕ್ರವಾರದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಎಂದು ರಾಹುಲ್ ಗುರುವಾರ ಇಡಿಗೆ ಪತ್ರ ಬರೆದಿದ್ದಾರೆ. ಅವರು ಪತ್ರದ ಮೂಲಕ ಸಲ್ಲಿಸಿದ ಮನವಿಗೆ ಇಡಿ ಅಧಿಕಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೋವಿಡ್ ನಂತರದ ಕಾಯಿಲೆಯಿಂದ ಬಳಲುತ್ತಿರುವ ಸೋನಿಯಾ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂ.23 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಅವರಿಗೆ ಸೂಚನೆ ನೀಡಿದೆ.
ಇದನ್ನೂ ನೋಡಿ: ನೂಪುರ್ ಹೇಳಿಕೆ ಖಂಡಿಸಿ 10 ರಾಜ್ಯಗಳಲ್ಲಿ ಹಿಂಸಾಚಾರ,ರಾಜ್ಯದಲ್ಲಿ ಭದ್ರತೆ ಹೆಚ್ಚಳ!