News Hour: ಹೊಸ ಸಂಸತ್ತಿನ ನೆತ್ತಿಯಲ್ಲಿ ಸಿಂಹ ಘರ್ಜನೆ: ಮೂಲ ಲಾಂಛನ ವಿರೂಪಗೊಳಿಸಿತಾ ಮೋದಿ ಸರ್ಕಾರ?

News Hour: ಹೊಸ ಸಂಸತ್ತಿನ ನೆತ್ತಿಯಲ್ಲಿ ಸಿಂಹ ಘರ್ಜನೆ: ಮೂಲ ಲಾಂಛನ ವಿರೂಪಗೊಳಿಸಿತಾ ಮೋದಿ ಸರ್ಕಾರ?

Published : Jul 12, 2022, 10:34 PM IST

National Emblem Row: ನೂತನ ಸಂಸತ್ ಭವನಕ್ಕೆ ಕಿರೀಟ ಎನ್ನುವಂತೆ ನಿನ್ನೆಯಷ್ಟೇ ಕಂಚಿನ ರಾಷ್ಟ್ರ ಲಾಂಛನವನ್ನ ಪ್ರಧಾನಿ ಮೋದಿ ಅನಾವರಣ ಗೊಳಿಸಿದ್ದರು. 

ನವದೆಹಲಿ (ಜು. 12): ನೂತನ ಸಂಸತ್ ಭವನಕ್ಕೆ ಕಿರೀಟ ಎನ್ನುವಂತೆ ನಿನ್ನೆಯಷ್ಟೇ ಕಂಚಿನ ರಾಷ್ಟ್ರ ಲಾಂಛನವನ್ನ ಪ್ರಧಾನಿ ಮೋದಿ ಅನಾವರಣ ಗೊಳಿಸಿದ್ದರು. ರಾಷ್ಟ್ರೀಯ ಲಾಂಛನವನ್ನು ಮಾರ್ಪಡಿಸಲಾಗಿದೆ ಮತ್ತು ಅವಮಾನಿಸಲಾಗಿದೆ ಅನ್ನೋದು ವಿಪಕ್ಷಗಳ ಪ್ರಮುಖ ಆರೋಪ. ಸಾಮಾನ್ಯವಾಗಿ ರಾಷ್ಟ್ರ ಲಾಂಛನದಲ್ಲಿರುವ ಸಿಂಹಗಳು ಸೌಮ್ಯ ಸಂದೇಶ ಸಾರುತ್ತವೆ. ಆದರೆ ಈ ಹೊಸ ಶಿಲ್ಪದಲ್ಲಿ ‘ನರಭಕ್ಷಕ ಪ್ರವೃತ್ತಿ’ ರೀತಿಯಲ್ಲಿ ಬಿಂಬಿಸಲಾಗಿದೆ. ಸಾಮಾನ್ಯ ಲಾಂಛನದಲ್ಲಿ ಸಿಂಹದ ಹಲ್ಲುಗಳು ಕಾಣಿಸಲ್ಲ. ಆದ್ರಿಲ್ಲಿ ಸಿಂಹದ ಹಲ್ಲುಗಳು ಕಾಣಿಸುತ್ತಿವೆ ಎಂದು ಆರ್ಜೆಡಿ ಸೇರಿ ವಿಪಕ್ಷಗಳು ಆರೋಪಿಸಿವೆ. ಅಷ್ಟು ಮಾತ್ರವಲ್ಲ ಕಾರ್ಯಾಂಗದ ಮುಖ್ಯಸ್ಥರಾಗಿರುವ ಪ್ರಧಾನಿ, ಈ ಲಾಂಛನ ಅನಾವರಣ ಮಾಡಿದ್ದು ಎಷ್ಟು ಸರಿ ಅನ್ನೋ ಪ್ರಶ್ನೆಯನ್ನೂ ಹಾಕಿದ್ದಾರೆ.

ಮೂಲ ರಾಷ್ಟ್ರೀಯ ಲಾಂಛನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಂಸತ್ ಮೇಲಿರುವುದು 3D ಮಾದರಿಯ ಲಾಂಛನ. ಇದಕ್ಕೆ 2D ಫೋಟೋ ಮೂಲಕ ಹೋಲಿಕೆ ಮಾಡಲಾಗುತ್ತಿದೆಯಷ್ಟೇ. ಸಾರನಾಥದಲ್ಲಿನ ಮೂಲ ಮಾದರಿಯಂತೆ ಲಾಂಛನ ರಚನೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ ಬಿಜೆಪಿ, ಮೋದಿ ಈ ಲಾಂಛನ ಬಿಡುಗಡೆ ಮಾಡಿದ್ದೇಕೆ ಅನ್ನೋದಕ್ಕೂ ಸ್ಪಷ್ಟನೆ ಕೊಟ್ಟಿದೆ.

ಇದನ್ನೂ ನೋಡಿ: ಹೊಸ ಸಂಸತ್‌ ಭವನದ ಮೇಲೆ ರಾರಾಜಿಸಲಿದೆ ರಾಷ್ಟ್ರೀಯ ಲಾಂಛನ, ಪ್ರಧಾನಿಯಿಂದ ಅನಾವರಣ

ನೂತನ ಸಂಸತ್ ಭವನ ಶಂಕುಸ್ಥಾಪನೆ ಮಾಡಿದವರೂ ಪ್ರಧಾನಿಗಳೇ, ಈಗ ಲಾಛಂನವನ್ನೂ ಅವರೇ ಉದ್ಘಾಟಿಸಿದ್ದಾರೆ. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು. ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ಸಂಸತ್ ನಿರ್ಮಾಣ ಮಾಡಲಾಗುತ್ತಿದೆ. 

ಕಟ್ಟಡ ಪೂರ್ಣವಾದ ಬಳಿಕ ಸಂಸತ್ ಆಡಳಿತಕ್ಕೆ ಕಟ್ಟಡ ಹಸ್ತಾಂತರಿಸಲಾಗುತ್ತೆ. ಆದರೆ ವಿರೋಧಪಕ್ಷಗಳು ರಾಜಕೀಯ ಕಾರಣಕ್ಕೆ ಟೀಕೆ ಮಾಡುತ್ತಿವೆ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ ಬಿಜೆಪಿ ಏನೇ ಸ್ಪಷ್ಟನೆ ನೀಡಿದರು ವಿಪಕ್ಷಗಳು ಒಪ್ಪುತ್ತಿಲ್ಲ. ಮೂಲ ರಾಷ್ಟ್ರ ಲಾಂಛನದ ಜೊತೆಗೆ ನೂತನ ಲಾಂಛನದ ಫೋಟೋ ಹಾಕಿ ವಿವಾದವನ್ನು ದೊಡ್ಡದು ಮಾಡುತ್ತಾ ರಾಜಕೀಯಕ್ಕೆ ಇಳಿದಿವೆ. 

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more