Narendra Modi: ಹೇಗಿರಲಿದೆ ಭಾರತ್ ಶಕ್ತಿ ಪ್ರದರ್ಶನ..? ಗುರುವಿನ ಹಾದಿಯಲ್ಲೇ ಶಿಷ್ಯೋತ್ತಮ ಮೋದಿ..!

Mar 4, 2024, 10:26 AM IST

ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತಕ್ಕೆ(Atmanirbhar India) ಕರೆ ಕೊಟ್ಟಿದ್ದರು. ಸ್ವದೇಶಿ ಉತ್ಪಾದನೆಗಳ ಹೆಚ್ಚಳಕ್ಕೆ ಆಗ್ರಹಿಸಿದ್ದರು. ಆತ್ಮನಿರ್ಭರ ಭಾರತ ಸೇನಾ ವಲಯದಲ್ಲೂ ಸಾಕಷ್ಟು ಸಾಧನೆ ಮಾಡಿದೆ. ನಮ್ಮದೇ ದೇಶದಲ್ಲಿ ನಿರ್ಮಾಣವಾಗಿರೋ ರಾಕೆಟ್ ಲಾಂಚರ್‌ಗಳು, ಯುದ್ಧ ವಿಮಾನಗಳು ಸೇನೆಯ ಶಕ್ತಿಯನ್ನ ದುಪ್ಪಟ್ಟು ಮಾಡಿದೆ. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ನಂತರ ಪೋಖ್ರಾನ್‌ಗೆ(Pokhran) ಭೇಟಿ ನೀಡ್ತಾ ಇರೋ ಮೊದಲ ಪ್ರಧಾನಿ ನರೇಂದ್ರ ಮೋದಿ(Narendra Modi) ಆಗಲಿದ್ದಾರೆ. ರಾಜಸ್ಥಾನದಲ್ಲಿ ಇರೋ ಈ ಜಾಗಕ್ಕೆ ತುಂಬಾನೇ ಮಹತ್ವವಿದೆ. ಭಾರತವೇನು ಸಾಧಿಸುತ್ತೆ ಅಂತ ಎಲ್ಲಾ ದೇಶಗಳು ಓಡಾಡುತ್ತಿದ್ದಾಗ ಭಾರತ ಅಣುಶಕ್ತಿಯನ್ನ ಹೊಂದಬಲ್ಲದು ಅನ್ನೋದನ್ನ ಜಗತ್ತಿಗೆ ಸಾರಿದ್ದು ಇದೇ ಪೋಖ್ರಾನ್. ಪೋಖ್ರಾನಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಮಾರ್ಚ್ 12 ರಂದು ಮೋದಿ ಪೋಖ್ರಾನ್ ಅಂಗಳಕ್ಕೆ ಕಾಲಿಡ್ತಾ ಇದಾರೆ. ಚುನಾವಣೆ ಹತ್ತಿರವಾಗ್ತಾ ಇರೋ ಸಂದರ್ಭದಲ್ಲೇ ಮೋದಿಯ ಈ ಭೇಟಿ ಕುತೂಹಲ ಮೂಡಿಸಿದೆ. 

ಇದನ್ನೂ ವೀಕ್ಷಿಸಿ:  Kodishree prediction: ಕೋಡಿಶ್ರೀ ಭವಿಷ್ಯ ನಿಜವಾಯ್ತಾ..? 2024ಕ್ಕೆ ತಪ್ಪಿದ್ದಲ್ಲ ಆಪತ್ತು..!