ರಾಜ್ಯದ ಲೋಕಸಭೆ ಕ್ಷೇತ್ರಗಳಲ್ಲಿ ಹೆಚ್ಚಿನ ಗೆಲುವು ಯಾರಿಗೆ?: 'ಇಂಡಿಯಾ ಟು ಡೇ' ಸಮೀಕ್ಷೆಯಲ್ಲಿ ಏನಿದೆ?

Jan 28, 2023, 11:52 AM IST

ಇಂಡಿಯಾ ಟು ಡೇ, ಸಿ-ವೋಟರ್‌ ಜನಾಭಿಪ್ರಾಯ ಸಂಗ್ರಹಿಸಿದ್ದು, ಲೋಕಸಭಾ ಚುನಾವಣೆ ನಡೆದರೆ ಯಾರಿಗೆ ಎಷ್ಟು ಸ್ಥಾನ ಹಾಗೂ ಕರ್ನಾಟಕದ ಲೋಕಸಭೆ ಕ್ಷೇತ್ರಗಳಲ್ಲಿ ಹೆಚ್ಚು ಗೆಲ್ಲುವುದು ಯಾರು ಎಂದು ಸಮೀಕ್ಷೆ ನಡೆಸಿದೆ. ಜನಾಭಿಪ್ರಾಯದ ವೋಟ್‌ ಶೇರಿಂಗ್‌'ನಲ್ಲಿ 43 % ಎನ್‌ ಡಿ ಎ. 30.5 ಯುಪಿಎಗೆ, 27% ಇತರೆ. ಈಗ ಚುನಾವಣೆ ನಡೆದರೆ ಈ ಫಲಿತಾಂಶ ಬರುವುದಾಗಿ ಸರ್ವೆ ಹೇಳಿದೆ. ಕಾಂಗ್ರೆಸ್‌ ಜೋಡೋ ಯಾತ್ರೆ ಪರಿಣಾಮ ಬೀರಿದೆಯಾ ಎಂದು ಕೂಡ ಚರ್ಚೆ ಶುರುವಾಗಿದೆ. ಬಿಜೆಪಿ 284 ಕಾಂಗ್ರೆಸ್‌ 68 ಇತರೆ 191 ಇನ್ನು 298 ಎನ್‌ಡಿಎ, ಯುಪಿಎ 153 ಹಾಗೂ ಇತರೆ 92 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.