Watch Video: ಕಾಂಗ್ರೆಸ್‌ಗೆ ಲಾಭ ಕೊಡುತ್ತಾ..ಶಾಪವಾಗುತ್ತಾ ಹೇಳಿಕೆಗಳು! ಜಾತಿ ಗಣತಿ..ಸಂಪತ್ತು ಮರುಹಂಚಿಕೆ..ಡೆತ್ ಟ್ಯಾಕ್ಸ್..!

Apr 25, 2024, 4:53 PM IST

ಕಾಂಗ್ರೆಸ್‌ಗೆ ಮತ ಹಾಕೋದೂ ಒಂದೇ, ಹಣ, ಆಸ್ತಿ, ಸಂಪತ್ತು ಅದೆಲ್ಲವನ್ನೂ ಕಳ್ಕೊಳೋದೂ ಒಂದೇ. ಈ ಮಾತು ಹೇಳೋ ಮೂಲಕ, ರಾಜಕೀಯದಲ್ಲಿ ಹೊಸ ದಾಳ ಉರುಳಿಸಿದೆ ಬಿಜೆಪಿ. ಕಾಂಗ್ರೆಸ್(Congress) ಅಧಿಕಾರಕ್ಕೆ ಬಂದ್ರೆ ಪಿತ್ರಾರ್ಜಿತ ಆಸ್ತಿಗೂ  ಟ್ಯಾಕ್ಸ್ ಬೀಳುತ್ತೆ ಎಂದು ಸ್ಯಾಮ್‌ ಪಿತ್ರೋಡಾ(Sam Pitroda) ಹೇಳಿದ್ದರು. ಇದಕ್ಕೆ ಬಿಜೆಪಿ ಅಪ್ಪ ಅಮ್ಮ ಕಷ್ಟ ಪಟ್ಟುಗಳಿಸಿದ ಆಸ್ತಿ ಮಕ್ಕಳ ಕೈಸೇರೋ ಬದಲು ಕಾಂಗ್ರೆಸ್ ಪಾಲಾಗುತ್ತೆ ಅನ್ನೋ ಮಾತಾಡ್ತಾ ಇದೆ. ಬಿಜೆಪಿ(BJP) ಪಾಳಯಕ್ಕೆ ಕಾಂಗ್ರೆಸ್ ಪಡೆಯಿಂದ ಅದಾಗದೇ ಒಂದು ಆಯುಧ ಸಿಕ್ಕಿಬಿಟ್ಟಿದೆ. ಆ ಆಯುಧ ಬಳಸಿಕೊಂಡೇ ಮೋದಿ(Narendra Modi), ಸಂಪತ್ತಿಗೆ ಸವಾಲ್ ಹಾಕ್ತಾ ಇದಾರೆ. ಈ ಬಾರಿ ಕಾಂಗ್ರೆಸ್ ವಿಭಿನ್ನ ಪ್ರಯತ್ನ ಮಾಡ್ತಾ ಇದೆ. ದಶಕದಿಂದಲೂ ಗಗನ ಕುಸುಮವಾಗಿರೋ ಪ್ರಧಾನಿ ಪಟ್ಟವನ್ನ ಈ ಬಾರಿ ಗೆದ್ದೇ ಗೆಲ್ಲಬೇಕು ಅನ್ನೋ ಜಿದ್ದಿಗೆ ಬಿದ್ದಿದೆ. ಅದೇ ಕಾರಣಕ್ಕಾಗಿಯೇ, ತೆಲಂಗಾಣದಲ್ಲಿ, ಕರ್ನಾಟಕದಲ್ಲಿ ಯಾವ ಗ್ಯಾರಂಟಿ ವರ್ಕೌಟ್ ಆಯ್ತೋ, ಅದೇ ಗ್ಯಾರಂಟಿ ಇಟ್ಕೊಂಡು ಅಖಾಡಕ್ಕೆ ಧುಮುಕಿದೆ. ತನ್ನ 46 ಪುಟಗಳ ಪ್ರಣಾಳಿಕೆಲಿ ಬರೋಬ್ಬರಿ 25 ಗ್ಯಾರಂಟಿ ಘೋಷಿಸಿ, ಎಲೆಕ್ಷನ್ ಯುದ್ಧ ಗೆಲ್ಲೋಕೆ ಹೊರಟಿದೆ.. ಆದ್ರೆ, ಈ ಗ್ಯಾರಂಟಿಗಳಿಗಿಂತಲೂ ಹೆಚ್ಚು ಸದ್ದು ಮಾಡ್ತಾ ಇರೋ ಸಂಗತಿನೇ ಬೇರೆ ಇದೆ