Gowthami K | Updated: Mar 24, 2025, 2:58 PM IST
ಹಾವಿನ ದ್ವೇಷ 12 ವರ್ಷ ಎಂದು ಹೇಳ್ತಾರೆ. ಆದ್ರೆ ನಾವಿಗ ಹೇಳ್ತಿರೋ ಸ್ಟೋರಿ ತುಂಬಾನೇ ಡಿಫರೆಂಟ್. ಈ ಸ್ಟೋರಿಯನ್ನು ಸಂಪೂರ್ಣವಾಗಿ ನೋಡಿದ ಮೇಲೆ ಹಾವಿನ ದ್ವೇಷ ಕೇವಲ 12 ವರ್ಷವಲ್ಲ 100 ವರ್ಷ ಎಂದು ನಿಮಗೂ ಅನ್ನಿಸುತ್ತೆ. ಒಬ್ಬ ವ್ಯಕ್ತಿಗೆ ಹೆಚ್ಚೆಂದ್ರೆ ಜೀವನದಲ್ಲಿ ಎಷ್ಟು ಬಾರಿ ಹಾವು ಕಚ್ಚಲು ಸಾಧ್ಯ? ಒಂದು ಅಥವಾ ಎರಡು ಬಾರಿ ಕಚ್ಚು ಬಹುದು. ಇದಕ್ಕೂ ಹೆಚ್ಚೆಂದ್ರೆ ಮೂರು ನಾಲ್ಕು ಬಾರಿ ಕಚ್ಚಬಹುದು. ಆದ್ರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 103 ಬಾರಿ ಹಾವು ಕಚ್ಚಿಸಿಕೊಂಡಿದ್ದಾನೆ ಎಂದ್ರೆ ನೀವು ನಂಬರ್ತೀರಾ?
ಹೌದು, 103 ಬಾರಿ ಹಾವು ಕಚ್ಚಿಸಿಕೊಂಡು ಇನ್ನೂ ಬದುಕಿರುವ ಆ ವ್ಯಕ್ತಿ ಈತನೇ ನೋಡಿ. ಈ ವ್ಯಕ್ತಿ ಹೆಸರು ಸುಬ್ರಹ್ಮಣ್ಯಂ ಎಂದು. ಈತ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬೈರೆಡ್ಡಿಪಲ್ಲಿ ಬಳಿ ಇರುವ ಕುಮ್ಮರಿ ಕುಂಟಾ ಎಂಬ ಗ್ರಾಮದವನು. ಈ ವ್ಯಕ್ತಿಗೆ ಈಗ 47 ವರ್ಷ ವಯಸ್ಸು. 47 ವರ್ಷದ ಸುಬ್ರಹ್ಮಣ್ಯಂನಿಗೆ ಇಲ್ಲಿಯವರೆಗೂ 103 ಬಾರಿ ಹಾವುಗಳ ಕಚ್ಚಿವೆಯಂತೆ. ಇದು ನಂಬಲು ಅಸಾಧ್ಯವಾದರೂ, ಕೇಳಲು ಅಚ್ಚರಿ ಎನಿಸಿದರೂ ಸತ್ಯ.