ಕರ್ನಾಟಕಕ್ಕೆ ಮಹಾರಾಷ್ಟ್ರದೊಂದಿಗೂ ಶುರುವಾಗುತ್ತಾ ನೀರಿನ ಸಮರ? ಇದೇನಿದು ಹೊಸ ಕುತಂತ್ರ?

May 27, 2024, 3:09 PM IST


ಕರ್ನಾಟಕ ಗಡಿಭಾಗದ ರಾಜ್ಯಗಳ ಜೊತೆಗೆ ಎಷ್ಟೇ ಚೆನ್ನಾಗಿರಲು ಪ್ರಯತ್ನಿಸಿದರೂ ಸಹ ಬೇರೆ ರಾಜ್ಯಗಳು ನಾಡಿಗೆ ವಿವಿಧ ರೀತಿಯಲ್ಲಿ ತೊಂದರೆ ಕೊಡುತ್ತಲೇ ಬರುತ್ತಿವೆ. ಈ ನಡಿವೆ ನೀರಿನ ವಿಚಾರದಲ್ಲೂ ಮಹಾರಾಷ್ಟ್ರ (Maharashtra) ಕ್ಯಾತೆ ತೆಗೆಯಲು ಮುಂದಾಗಿದೆ. ಹರಿದು ಬರುತ್ತಿದ್ದ ನೀರನ್ನು ಏಕನಾಥ ಶಿಂಧೆ ಸರ್ಕಾರ(Eknath Shinde Govt) ತಡೆದಿದೆ. ಈ ಮೂಲಕ ಮಹಾರಾಷ್ಟ್ರದೊಂದಿಗೂ ಶುರುವಾಗುತ್ತಾ ನೀರಿನ ಸಮರ ಎನ್ನುವ  ಪ್ರಶ್ನೆ ಕಾಡತೊಡಗಿದೆ. 

ಮಹಾರಾಷ್ಟ್ರದಲ್ಲಿ ಕೆಲ ದಿನದಿಂದ ಭಾರೀ ಮಳೆ ಸುರಿಯುತ್ತಿದ್ದು, ರಾಜಾಪುರ ಬ್ರಿಡ್ಜ್ ಕಮ್ ಬ್ಯಾರೇಜ್‌ (Rajapur Bridge cum Barrage)  ಓವರ್ ಪ್ಲೋ ಆಗಿದೆ. ಕೊಲ್ಹಾಪುರ ಜಿಲ್ಲೆ ಶಿರೋಳ ತಾಲೂಕಿನ ರಾಜಾಪುರ ಬ್ಯಾರೇಜ್ ಇದ್ದು, ಹರಿದು ಬರುತ್ತಿದ್ದ ನೀರು ಕಂಡು ರೈತರು ಖುಷಿಯಾಗಿದ್ದರು. ಅದರಲ್ಲೂ ಬೆಳಗಾವಿ, ವಿಜಯಪುರ, ಬಾಗಲಕೋಟೆ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ದುರಂತ ಎಂದರೆ ಕೃಷ್ಣಾ ನದಿ (Krishna river) ಮೂಲಕ ಹರಿದು ಬರುತ್ತಿದ್ದ ನೀರನ್ನು ಮಹಾರಾಷ್ಟ್ರ ಸರ್ಕಾರ ತಡೆದಿದೆ. ಅದಾಗ್ಯೂ ಕರ್ನಾಟಕ ರೈತರ (Karnataka Farmers) ಮೇಲೆಯೇ ಮಹಾರಾಷ್ಟ್ರ ಅಧಿಕಾರಿಗಳು ಗೂಬೆ ಕೂರಿಸಲು ಮುಂದಾಗಿದ್ದಾರೆ. ಬ್ಯಾರೇಜ್ ಗೇಟ್ ಓಪನ್ ಮಾಡಿ ನೀರು ಖದಿಯುತ್ತಿದ್ದಾರೆಂದು ಆರೋಪ ಮಾಡಿದ್ದಾರೆ. ಇದಕ್ಕಾಗಿ ನೀರು ತಡೆಯಲು ಬ್ರಿಡ್ಜ್ ಮೇಲೆ ಪೊಲೀಸರು, ನೀರಾವರಿ ಅಧಿಕಾರಿಗಳ ನೇಮಕ ಸಹ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ‘ಕೈ’ಗೆ ಸಿಗುವ 7 ಸ್ಥಾನಗಳಿಗೆ 60ಕ್ಕೂ ಹೆಚ್ಚು ಆಕಾಂಕ್ಷಿಗಳು: ಅಭ್ಯರ್ಥಿ ಆಯ್ಕೆ ಸಂಬಂಧ ದೆಹಲಿಗೆ ಸಿಎಂ, ಡಿಸಿಎಂ!