Dec 14, 2023, 11:44 PM IST
ಬೆಂಗಳೂರು (ಡಿ.14): ದೇಶದ ಗಮನಸೆಳೆಯುವ ಸಲುವಾಗಿ ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆರೂ ಜನ ಆರೋಪಿಗಳ ಮೇಲೆ ಗಂಭೀರ ಪ್ರಮಾಣದ ಯುಎಪಿಎ ಕಾಯ್ದಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ಎಸೆದ ಮೈಸೂರಿನ ಮನೋರಂಜನ್ ಅವರ ನಿವಾಸಕ್ಕೆ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ತಂದೆ-ತಾಯಿಯ ವಿಚಾರಣೆ ನಡೆಸಿದ್ದಾರೆ. ಮನೋರಂಜನ್‌ನ ಕೋಣೆಯನ್ನು ಅಧಿಕಾರಿಗಳು ಇಂಚಿಂಚು ಜಾಲಾಡಿದ್ದಾರೆ.
ತೀಸ್ರಿ ಬಾರ್, ಮೋದಿ ಸರ್ಕಾರ್; 2024ರಲ್ಲೂ ನಮೋಗೆ ಅಧಿಕಾರ ಎಂದ ಸರ್ವೇ
ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ಎಸೆದವರು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದಿರುವ ಹಿನ್ನಲೆಯಲ್ಲಿ, ಪ್ರತಾಪ್ ಸಿಂಹ ಅವರ ಸಂಸತ್ ಸದಸ್ಯತ್ವವನ್ನು ಸಸ್ಪೆಂಡ್ ಮಾಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.